ಬೀದಿನಾಯಿಗಳ ಹಸಿವು ನೀಗಿಸಿ ಮಾನವೀಯತೆ ಮೆರೆದ ಕೊರೋನಾ ವಾರಿಯರ್ ಪ್ರೇಮ್ ಸಾಗರ್

ಬೆಳ್ತಂಗಡಿ:‌ ಇಡೀ ದೇಶವೇ ಕೊರೋನಾ ಮಾರಣಾಂತಿಕ ರೋಗಕ್ಕೆ ಭಯಭೀತವಾಗಿದೆ. ಪ್ರತೀಯೊಬ್ಬರು ಮನೆಯಲ್ಲಿ ಕೂತು ಪ್ರಾಣ ಕಾಪಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಅದೆಷ್ಟೋ ಜನ ಆಹಾರಕ್ಕಾಗಿ ಪರದಾಡುವ ಪರಿಸ್ಥಿಯೂ ನಿರ್ಮಾಣವಾಗಿದೆ. ಆದರೆ ನಗರಗಳಲ್ಲಿ ಹೊಟೇಲ್ , ಅಂಗಡಿ, ವಿವಿಧ ಕಾರ್ಯಕ್ರಮಗಳಲ್ಲಿ ಜನ ಬೇಡವೆಂದು ಎಸೆಯುತ್ತಿದ್ದ‌ ಅನ್ನವನ್ನು ತಿಂದು ಬದುಕುತ್ತಿದ್ದ ಬೀದಿ ನಾಯಿಗಳು ಒಂದು ಹೊತ್ತಿನ ಅನ್ನವಿಲ್ಲದೆ ಕಂಗಾಲಾಗಿದೆ.

ಇದನ್ನು ಅರಿತ ಕೊರೋನಾ ವಾರಿಯರ್ ಪ್ರೇಮ್ ಸಾಗರ್ ಲೈಲಾ ಗ್ರಾಮದ ಚೆಕ್ ಪೋಸ್ಟ್ ಗೆ ಬರುತ್ತಿದ್ದ ಅನ್ನವನ್ನು ಸ್ವಲ್ಪ ಉಳಿಸಿ ಅಲ್ಲಿ ಓಡಾಡುತ್ತಿದ್ದ ನಾಯಿಗಳಿಗೆ ಹಾಕಿ ಅವುಗಳ ಹಸಿವು ನೀಗಿಸಿ ಮಾನವೀಯತೆ ಮೆರೆದಿದ್ದಾರೆ.
ಇವರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

20 ವರ್ಷದ ಪ್ರೇಮ್ ಸಾಗರ್ ಕಾಲೇಜ್  ವಿದ್ಯಾರ್ಥಿಯಾಗಿದ್ದು ಕೊರೋನಾದ ಈ ಸಮಯದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ಪಂಚಾಯತ್ ನಲ್ಲಿ, ಚೆಕ್ ಪೋಸ್ಟ್ ನಲ್ಲಿ ಹಾಗೂ ಕಿಟ್ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

error: Content is protected !!