ತೂಗು ಸೇತುವೆ ಕುಸಿದು  ಬಿದ್ದು  60ಕ್ಕೂ ಹೆಚ್ಚು ಜನ ದುರ್ಮರಣ: ಗುಜರಾತ್ ಮೊರ್ಬಿ ನಗರದಲ್ಲಿ ನಡೆದ ಘಟನೆ:

 

 

ಗುಜರಾತ್​ : ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ಭಾನುವಾರ ಸಂಜೆ ಕುಸಿದು ಬಿದ್ದ ಪರಿಣಾಮ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸೇತುವೆ ಮೇಲೆ ನಿಂತಿದ್ದ ಹಲವರು ನದಿಗೆ ಬಿದ್ದಿರುವ ಘಟನೆ ಗುಜರಾತ್‌ನ ಮೊರ್ಬಿ ನಗರದಲ್ಲಿ ನಡೆದಿದೆ.

ಮೊರ್ಬಿಯಲ್ಲಿರುವ ಮಚ್ಚು ನದಿಯ ತೂಗು ಸೇತುವೆ ನವೀಕರಣದ ನಂತರ ಇತ್ತೀಚೆಗೆ ಸಾರ್ವಜನಿಕರಿಗೆ ತೆರೆಯಲಾಗಿತ್ತು. ಭಾನುವಾರ ಸಂಜೆ ಸೇತುವೆ ಮೇಲೆ ಅನೇಕ ಜನ ನಿಂತಿದ್ದರು. ಈ ವೇಳೆ ಜನರ ಹೆಚ್ಚಿನ ಭಾರದಿಂದ ಸೇತುವ ಕುಸಿದಿದೆ. ಸೇತುವೆ ಕುಸಿತದಿಂದಾಗಿ ಹಲವರು ನದಿಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೇತುವೆ ಕುಸಿತದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಇದ್ದರು. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನದಿಗೆ ಬಿದ್ದಿದ್ದರಿಂದ ಅನೇಕ ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ತುರ್ತು ರಕ್ಷಣಾ ತಂಡಗಳನ್ನು ಸಜ್ಜುಗೊಳಿಸುವಂತೆ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ಪ್ರಧಾನಿ ಮೋದಿ ಹಾಗೂ ಗುಜರಾತ್ ಸಿಎಂ ಪಟೇಲ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!