ಬೆಳ್ತಂಗಡಿ ತಾಲೂಕು ಆಸ್ಪತ್ರೆಗೇ ಅನಾರೋಗ್ಯ, ತಹಶಿಲ್ದಾರ್ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಗರಂ, ಅಧಿಕಾರಿಗಳಿಗೆ ತರಾಟೆ: ಡಯಾಲಿಸಿಸ್ ವಿಭಾಗದ ಸಮಸ್ಯೆ ಸರಿಪಡಿಸಲು ಕಟ್ಟುನಿಟ್ಟಿನ ಸೂಚನೆ

 

 

ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂಬ ದೂರಿನ ಹಿನ್ನಲೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ ಇಂದು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ‌.

 

 

ತಾಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿಯ ಡಯಾಲಿಸಿಸ್ ವಿಭಾಗದಲ್ಲಿ ಇನ್ವರ್ಟರ್ ಸಮಸ್ಯೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ರೋಗಿಗಳಿಂದ ಬೆಳ್ತಂಗಡಿ ತಹಶೀಲ್ದಾರ್ ಕಚೇರಿಗೆ ಬಂದಿತ್ತು. ಹೀಗಾಗಿ ಇಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ ಮತ್ತು ತಂಡ ದಿಢೀರ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

ಈ ವೇಳೆ ಇನ್ವರ್ಟರ್ ಸಮಸ್ಯೆ ಕಂಡು ಬಂದಿದ್ದು ನಂತರ ವೈದ್ಯಾಧಿಕಾರಿ ಚಂದ್ರಕಾಂತ್ ಮತ್ತು ಸಿಬ್ಬಂದಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡರು. ಅದಲ್ಲದೆ ಏಜೆನ್ಸಿಗೆ ತಕ್ಷಣ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಸೂಚಿಸಿದರು.

error: Content is protected !!