ವಾಲ್ಮೀಕಿ ರಾಮಾಯಣ ಜಗದ ಜನರ ಜೀವನವನ್ನು ಬದಲಾಯಿಸಿದ ಮಹಾ ಕಾವ್ಯ : ಶಾಸಕ ಹರೀಶ್ ಪೂಂಜ ಬೆಳ್ತಂಗಡಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ:

 

ಬೆಳ್ತಂಗಡಿ :ವಾಲ್ಮೀಕಿ ರಾಮಾಯಣ ಜಗದ ಜನರ ಜೀವನವನ್ನು ಬದಲಿಸಿದ ಮಹಾಕಾವ್ಯವಾಗಿದೆ. ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು ಅವರು ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾ.ಪಂ., ಪಂ.ಪಂ., ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ
ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

 

 

ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳೂ ಓದುಗರ ವಿವೇಕ, ಬುದ್ಧಿ, ಮನಸ್ಸು , ಕ್ರಿಯೆ, ಕರ್ಮಗಳನ್ನು ಸೂಕ್ತ ರೀತಿಯಲ್ಲಿ ನಡೆಸಲು ದಾರಿ ತೋರಿಸುತ್ತದೆ.ಅನೇಕ ಕವಿಗಳಿಗೆ ಸ್ಫೂರ್ತಿಯಾಯಿತು.ಅದಕ್ಕೆ ಧರ್ಮ ಮಾರ್ಗದಲ್ಲಿ ನಡೆವ ಸಾಮಾಜಿಕ ಸದ್ಗುಣಗಳನ್ನು ಪ್ರತಿಪಾದಿಸುವ ಜ್ಞಾನ ಜ್ಯೋತಿ ರಾಮಾಯಣ ಮಹಾಕಾವ್ಯವೇ ಕಾರಣ ಇಂತಹ ಪವಿತ್ರ ಹಾಗೂ ಶ್ರೇಷ್ಠವಾದ ಮಹಾಕಾವ್ಯವನ್ನು ಜಗತ್ತಿಗೆ ನೀಡಿದ ಆದರ್ಶ ಪುರುಷ ಮಹರ್ಷಿ ವಾಲ್ಮೀಕಿಯಾಗಿದ್ದಾರೆ.

 

 

ಲೇಖಕರು,ಚಿಂತಕರು ಟಿ.ಎ.ಎನ್.ಖಂಡಿಗೆ ವಾಲ್ಮೀಕಿ ವಿಚಾರಗಳ ಬಗ್ಗೆ ಮಾತನಾಡಿದರು.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಿಂದ ಅತೀ ಹೆಚ್ಚು ಅಂಕ ಪಡೆದ ಪ.ಪಂಗಡದ ಎಸೆಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳು, ಮೂಲ ನಿವಾಸಿ ಕೊರಗ ಸಮುದಾಯದ ಎಸೆಸೆಲ್ಸಿ, ಏಳನೇ ತರಗತಿಯಲ್ಲಿ ಉತ್ತೀರ್ಣರಾದ 8 ಮಕ್ಕಳಿಗೆ, ತಾಲೂಕಿನ ಬೇರೆ ಬೇರೆ ಶಾಲೆಗಳಲ್ಲಿ ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 12 ಮಂದಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 11 ಮಂದಿ ಪ.ಪಂ. ಒಟ್ಟು 40 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ ಸೇರಿದಂತೆ ‌ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಹೇಮಚಂದ್ರ ಸ್ವಾಗತಿಸಿದರು. ಹೇಮಲತಾ ನಿರೂಪಿಸಿ, ವಂದಿಸಿದರು.

error: Content is protected !!