ಸೆ.30ರಂದು ಉಜಿರೆಯಲ್ಲಿ ‘ಕಾಶಿ ಪ್ಯಾಲೇಸ್’, ‘ದಿ ಓಷ್ಯನ್ ಪರ್ಲ್’ ಐಷಾರಾಮಿ ಹೋಟೆಲ್ ಲೋಕಾರ್ಪಣೆ: ಗ್ರಾಮೀಣ ಜನತೆಗೆ ಮಿತದರದಲ್ಲಿ ಸತ್ಕಾರ, ಸೇವೆ ನೀಡುವ ಭರವಸೆ: ಸುದ್ದಿಗೋಷ್ಠಿಯಲ್ಲಿ ಮಾಲಕರಿಂದ ಮಾಹಿತಿ

 

 

ಉಜಿರೆ: ಬರೋಡಾದಲ್ಲಿ 30 ವರ್ಷದಿಂದ ಉದ್ಯಮಿಯಾಗಿದ್ದು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಟರಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು , ಹುಟ್ಟಿದ ಊರಿನ ಜನತೆಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ‘ಕಾಶೀ ಪ್ಯಾಲೇಸ್’ ನಿರ್ಮಿಸಿ, ಓಶಿಯನ್ ಪರ್ಲ್ ಸಹಯೋಗದೊಂದಿಗೆ ಹೋಟೆಲ್ ಆರಂಭಿಸಲಾಗಿದೆ. ಐಷಾರಾಮಿ ಹೋಟೇಲ್ ಆಗಿದ್ದರೂ ಗ್ರಾಮೀಣ ಜನತೆಗೆ ಮಿತ ದರದಲ್ಲಿ ‘ಸಾಗರ ರತ್ನ’ ಬ್ರ್ಯಾಂಡ್ ನಲ್ಲಿ ಹೋಟೆಲ್ ನಡೆಯಲಿದೆ. ಹೋಟೆಲ್ ಸೆಪ್ಟೆಂಬರ್ 30ರಂದು ಲೋಕಾರ್ಪಣೆಯಾಗಲಿದೆ ಎಂದು ‘ಕಾಶೀ ಪ್ಯಾಲೇಸ್’ ಮಾಲಕ ಹಾಗೂ ಬರೋಡಾದ ‘ಶಶಿ ಕೆಟರರ್ಸ್’ ಎಂ.ಡಿ., ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ತಿಳಿಸಿದರು.

 

 

ಹೋಟೆಲ್ ಲೋಕಾರ್ಪಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಯಿ ‘ಕಾಶೀ’ ಅವರ ಹೆಸರಿನಲ್ಲಿ ಕಟ್ಟಡ ನಿರ್ಮಿಸಿದ್ದು, ಇದು ಅವರಿಗೆ ಮಾಡುವ ಅರ್ಪಣೆ. ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ ಹೆಗ್ಗಡೆ ಅವರ ಆಶೀರ್ವಾದದಿಂದ ಈ ಹೊಸ ಯೋಜನೆ ನಿರ್ಮಾಣವಾಗಿದೆ. ಇದಕ್ಕೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿದ್ದ ಡಾ.ಬಿ. ಯಶೋವರ್ಮ ಅವರೂ ನೂತನ ಉಜಿರೆ ನಿರ್ಮಾಣಕ್ಕೆ ಬೇಕಾದ ರೀತಿಯಲ್ಲಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ್ದರು ಎಂಬುದನ್ನು ಶಶಿಧರ ಶೆಟ್ಟಿ ಸ್ಮರಿಸಿಕೊಂಡರು.

 

 

30ರಂದು ಲೋಕಾರ್ಪಣೆ:

ಸೆ.30ರಂದು ಬೆಳಗ್ಗೆ 10 ಗಂಟೆಗೆ ಕಾಶಿ ಪ್ಯಾಲೆಸ್ ಕಟ್ಟಡದಲ್ಲಿ ದಿ ಓಷ್ಯನ್ ಪರ್ಲ್ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ತಾಯಿ ಕಾಶಿ ಶೆಟ್ಟಿ, ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೊಟೆಲ್ಸ್ ಅಧ್ಯಕ್ಷ ಜಯರಾಮ್ ಬನಾನ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಎಸ್.ಡಿ.ಎಂ.ಇ. ಐ.ಟಿ. ಹಾಗೂ ವಸತಿ ನಿಲಯ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ, ರಾಜ್ಯ ಇಂಧನ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಹರೀಶ್ ಪೂಂಜ, ಉಮಾನಾಥ ಎ. ಕೋಟ್ಯಾನ್, ಡಾ.ವೈ. ಭರತ್ ಶೆಟ್ಟಿ, ಯು. ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪ್ ಸಿಂಹ ನಾಯಕ್, ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ , ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾವತಿ ಆರ್ ಶೆಟ್ಟಿ , ಭಾಗವಹಿಸಲಿದ್ದಾರೆ ಎಂದು ಶಶಿಧರ ಶೆಟ್ಟಿ ಮಾಹಿತಿ ನೀಡಿದರು.

 

 

ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ಸ್ ಉಪಾಧ್ಯಕ್ಷ ಗಿರೀಶ್ ಎನ್. ಮಾತನಾಡಿ, ಓಷ್ಯನ್ ಪರ್ಲ್ ಅತಿಥಿ ಸತ್ಕಾರ ಮತ್ತು ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾಗಿದ್ದು, ಅತಿ ವೇಗದಲ್ಲಿ ಬೆಳೆಯುತ್ತಿರುವ ಉಜಿರೆಯಲ್ಲಿ ಐದನೇ ಶಾಖೆ ಸೆ. 30ರಂದು ಲೋಕಾರ್ಪಣೆಯಾಗುತ್ತಿದೆ. ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಬಳಿ ನಿರ್ಮಾಣವಾಗಿದ್ದು, 3 ಮಹಡಿಗಳ ಐಷಾರಾಮಿ ಹೋಟೆಲ್ ಆಗಿದೆ. 34 ಕೊಠಡಿಗಳನ್ನು ಹೊಂದಿದ್ದು. ಇಲ್ಲಿ 34 ರೂಮುಗಳಿದ್ದು, 31 ಎಕ್ಸ್ ಕ್ಯೂಟಿವ್ ಸೂಟು ರೂಮ್ ಗಳು, 2 ಸೂಟ್ ರೂಮ್ ಗಳು ಮತ್ತು 1ಪ್ರೆಸಿಡೆಂಟ್ ಸೂಟ್ ರೂಮ್ ಹೊಂದಿದೆ.

 

ಪೆಸಿಫಿಕ್

ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್
ಹೊಂದಿದೆ ಎಂದು‌ ಮಾಹಿತಿ ನೀಡಿದರು.

 

ಸಾಗರ ರತ್ನ’ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್:

140 ಮಂದಿಯ ಆಸನ ವ್ಯವಸ್ಥೆ ಸಾಮರ್ಥ್ಯ ಹೊಂದಿರುವ ‘ಸಾಗರ ರತ್ನ’ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್, 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಇದೆ. ಜೊತೆಗೆ ಆರೋಗ್ಯ ವರ್ಧನೆಗೆ ಸಹಕಾರಿಯಾಗುವಂತೆ ಓಶಿಯನ್ ಪರ್ಲ್ ಜಿಮ್ ನಿರ್ಮಿಸಲಾಗಿದೆ. ಮುಖ್ಯವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರು, ಯಾತ್ರಾರ್ಥಿಗಳಿಗೆ ಮಂಜುನಾಥನ ದೇವಸ್ಥಾನ ಭೇಟಿ ನೀಡುವವರಿಗೆ ಓಶಿಯನ್ ಪರ್ಲ್‌ ಸಹಕಾರಿಯಾಗಲಿದೆ ಎಂದು ಗಿರೀಶ್ ತಿಳಿಸಿದರು. ‌

 

 

 

ಸುದ್ದಿಗೋಷ್ಠಿಯಲ್ಲಿ ಓಷ್ಯನ್ ಪರ್ಲ್ ಗ್ರೂಪ್ ಪ್ರಾಜೆಕ್ಟ್ ಮ್ಯಾನೇಜರ್ ಶಿವಕುಮಾರ್, ಜನರಲ್ ಮ್ಯಾನೇಜರ್ ನಿತ್ಯಾನಂದ ಮೆಂಡಲ್ ಉಪಸ್ಥಿತರಿದ್ದರು.

error: Content is protected !!