ಬೆಳ್ತಂಗಡಿ : ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆ ಹಲವು ರೀತಿಯ ಪ್ರತಿಭೆಯನ್ನು ಬೆಳೆಸಿಕೊಂಡಿದ್ದಾರೆ. ಕಾಲೇಜು ಆವರಣದಲ್ಲಿ ಅವರು ಮಾಡಿರುವ ವರ್ಕಿಂಗ್ ಮಾಡೆಲ್, ಬೆಂಕಿಯಿಲ್ಲದೆ ಮಾಡಿದ ನಾನಾ ರೀತಿಯ ಅಡುಗೆ, ನಾನಾ ಪ್ರಕಾರದ ರಂಗೋಲಿಗಳು ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾಗಿದೆ’ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಮಂಗಳವಾರ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ನಾನಾ ರೀತಿಯ ಪ್ರತಿಭೆಯ ಕುರಿತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು. ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜಿತೇಶ್ ಬಿ.ಎಸ್. ಸಾಮಾನ್ಯ ಸೈಕಲ್ ಒಂದನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ರೀತಿಯ ಸೈಕಲ್ ಸಾಮಾನ್ಯ ಜನರ ಬದುಕಿಗೆ ವರದಾನವಾಗುವುದರಲ್ಲಿ ಅನುಮಾನವಿಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಸೈಕಲಿನ ಮೂಲಕವೂ ವೇಗದ ಪ್ರಯಾಣ ಸಾಧ್ಯ ಎಂದು ಈ ವಿದ್ಯಾರ್ಥಿ ತೋರಿಸಿಕೊಟ್ಟಿದ್ದಾನೆ ಎಂದರು.
ವಿದ್ಯಾರ್ಥಿಗಳಾದ ದ್ವಿತೀಯ ವಾಣಿಜ್ಯ ವಿಭಾಗದ ಆದರ್ಶ್ ಮತ್ತು ಧನುಶ್ ಉಚಿತ ಶಕ್ತಿ ಪರಿವರ್ತಕವನ್ನು, ತುಳಸಿ ಮತ್ತು ಸುಮಿತ್ರಾ ಯಾವುದೇ ತಂತಿಯ ಬಳಕೆಯಿಲ್ಲದೆ ವಿದ್ಯುತ್ ಪ್ರವಾಹವನ್ನು, ಮುಜೈನ್ ಅಲಿ, ಮಹಮ್ಮದ್ ತನ್ಸೀರ್, ಮಹಮ್ಮದ್ ಅಕ್ರಮ್, ಮಹಮ್ಮದ್ ಜಾಬೀರ್, ಮಹಮ್ಮದ್ ಸಾಹಿಲ್ ಮುಂತಾದ ವಿದ್ಯಾರ್ಥಿಗಳು ಸೇರಿಕೊಂಡು ಕಾಲೇಜಿನ ಅದ್ಭುತ ಮಾದರಿಯನ್ನು ತಯಾರು ಮಾಡಿದ್ದಾರೆ. ವಿಜ್ಞಾನ ವಿಭಾಗದ ಧನ್ಯಶ್ರೀ ಮತ್ತು ದೀಕ್ಷಾ ನೀರಿನ ವಿತರಕ ವ್ಯವಸ್ಥೆಯನ್ನು, ಸೌಜನ್ಯ ಮತ್ತು ಸರಿತಾ ಭೂಕಂಪನದ ಬಗ್ಗೆ ತಿಳಿಯಲು ರಿಕ್ಟರ್ ಮಾಪಕ ಹೋಲುವ ಯಂತ್ರವನ್ನು, ಪ್ರಥಮ ವಾಣಿಜ್ಯ ವಿಭಾಗದ ಅಭಿಜಿತ್ ಮತ್ತು ನವೀನ್ ಭೂಮಿಯ ಚಲನೆಗೆ ಸಂಬಂಧಿಸಿ ಡೇ ನೈಟ್ ಎಂಬ ಯಂತ್ರವನ್ನು ಕಂಡುಹಿಡಿದಿದ್ದಾರೆ. ಎಂದು ತಿಳಿಸಿ ವಿದ್ಯಾರ್ಥಿಗಳಿಂದ ಅದನ್ನು ಮಾಡಿಸಿ ತೋರಿಸಿದರು.
ಪ್ರಥಮ ವಾಣಿಜ್ಯ ವಿಭಾಗದ ಪೂರ್ಣಿಮಾ, ಸೃಜನಾ, ಶ್ರಾವ್ಯ, ಕೃತಿ, ಹರ್ಷಿನಿ, ಭೂಮಿಕಾ, ಶರಣ್ಯ, ದಿಶಾಂತ್, ಧೀರಜ್, ಪ್ರಥಮ ವಿಜ್ಞಾನ ವಿಭಾಗದ ಮೇಘಶ್ರೀ, ಅಪರ್ಣಾ, ಕಾವ್ಯಶ್ರೀ, ವೀಕ್ಷಿತಾ, ಭವಿಷ್ಯ, ಪ್ರಥ್ವಿಜಾ, ಪ್ರಥಮ ಕಲಾ ವಿಭಾಗದ ಮುಫಿದಾ, ಶಹರಿಯಾ, ದ್ವಿತೀಯ ವಿಜ್ಞಾನ ವಿಬಾಗದ ಧನ್ಯಶ್ರೀ ದೀಕ್ಷಾ, ಸ್ಪೂರ್ತಿ, ಮೋಕ್ಷಿತಾ, ಶಾಜನ್, ಆಯಿಷಾತುಲ್ ಆರಿಫಾ, ಪ್ರಾರ್ಥನಾ, ಅಂಕಿತಾ, ದ್ವಿತೀಯ ವಾಣಿಜ್ಯ ವಿಭಾಗದ ಸೃಷ್ಠಿ ಸೌಂದರ್ಯ, ಸಹನ್ಯಾ, ಅಫ್ರಿನಾ, ಪ್ರಣೀಕ್ಷಾ, ಪ್ರತೀಕ್ಷಾ, ದೀಕ್ಷಾ, ಲಾವಣ್ಯ, ವೃಶ್ಚಿಕಾ, ರಕ್ಷಿತಾ ದ್ವಿತೀಯ ಕಲಾ ವಿಭಾಗದ ಸಂಜನಾ, ಅಶ್ವಿತಾ, ರಕ್ಷಿತಾ, ಪೂಜಾ ಹೀಗೆ 40 ವಿದ್ಯಾರ್ಥಿಗಳು ಸೇರಿಕೊಂಡು 20 ತಂಡಗಳಾಗಿ ಬೆಂಕಿಯನ್ನು ಉಪಯೋಗಿಸದೆ ಮಾನವ ದಿನ ನಿತ್ಯ ಬಳಕೆ ಮಾಡುವ ಹಲವು ತಿನಿಸುಗಳನ್ನು ತಯಾರು ಮಾಡಿರುವುದು ಹೊಸ ತಲೆಮಾರಿನ ಜನಾಂಗದಲ್ಲಿ ಅಡುಗೆಯ ಆಸಕ್ತಿ ಕಳೆದು ಹೋಗಿಲ್ಲ. ಬದಲಾಗಿ ನವೀನತೆಯನ್ನು ಬೆಳೆಸಿಕೊಂಡು ಅಡುಗೆ ಕಾರ್ಯದಲ್ಲಿ ನಿರತರಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಪ್ರಥಮ ವಾಣಿಜ್ಯ ವಿಭಾಗದ ಪೂರ್ಣಿಮಾ ಮತ್ತು ನಯನ, ಪ್ರಜ್ಞಾ ಮತ್ತು ಕೀರ್ತಿಸಾ, ಕೃತಿ ಮತ್ತು ಹರ್ಷಿಣಿ, ಭೂಮಿಕಾ, ದೀಕ್ಷಿತಾ, ರೇವತಿ, ರಕ್ಷಿತಾ, ಶ್ರಾವ್ಯ, ಸುಚಿತ್ರಾ, ಪ್ರಥಮ ವಿಜ್ಞಾನ ವಿಭಾಗದ ಮಾನ್ಯ, ದೀಕ್ಷಾ, ಅನುಶ್ರೀ, ಚಂದನಾ, ದ್ವಿತೀಯ ವಾಣಿಜ್ಯ ವಿಭಾಗದ ನಿವೇದಿತ, ಅಂಕಿತಾ, ಯಶ್ಮಿತಾ, ಸುಮಿತ್ರಾ, ಋಶ್ಚಿಕಾ, ದೀಪ್ತಿ, ದೀಕ್ಷಾ, ಲಾವಣ್ಯ, ಧನ್ಯಾ, ನಿಶ್ಮಿತಾ, ಶ್ರಾವ್ಯ, ಶುಭವತಿ, ಅನುಷಾ, ಶಾಲಿನ, ಸೌಂದರ್ಯ, ಸೃಷ್ಠಿ, ದೀಪ್ತಿ, ಪ್ರಣೀಕ್ಷಾ, ಪ್ರೇಕ್ಷಾ ಎ, ಹೇಮಾಲತಾ, ಪ್ರತೀಕ್ಷಾ, ಅನಿಷಾ, ಆದರ್ಶ ಎಂ.ಆರ್, ಅನ್ವಿತಾ, ನಿಕಿತಾ, ಲೋಲಾಕ್ಷಿ, ದ್ವಿತೀಯ ವಿಜ್ಞಾನ ವಿಭಾಗದ ಧನ್ಯಶ್ರೀ ಮತ್ತು ಸ್ಪೂರ್ತಿ, ಸೌಜನ್ಯ, ಸರಿತಾ, ಪುಷ್ಪಲತಾ, ನಿಶ್ಮಿತಾ, ಮೌಲ್ಯ, ಸಂಧ್ಯಾ ಧನ್ಯಶ್ರೀ, ದೀಕ್ಷಾ, ಪ್ರಾರ್ಥನ ,ಅಂಕಿತಾ ಹೀಗೆ 54 ವಿದ್ಯಾರ್ಥಿಗಳು 27 ತಂಡಗಳಾಗಿ ನವೀನ ವಿನ್ಯಾಸದ ಹಲವು ಬಗೆಯ ರಂಗೋಲಿಗಳನ್ನು ಬಿಡಿಸಿದ್ದಾರೆ. ಪ್ರಾಚೀನವಾಗಿ ಮನೆಮಾತಾಗಿದ್ದ ರಂಗೋಲಿ ಇಂದಿಗೂ ಹಲವು ಕುಟುಂಬಗಳಲ್ಲಿ ಇದೆ ಮಾತ್ರವಲ್ಲ ಧರ್ಮರಹಿತವಾಗಿ ಇಂದಿಗೂ ಆ ಕಲೆಯನ್ನು ಜನ ಪ್ರೀತಿಸುತ್ತಾರೆ ಎಂಬುದಕ್ಕೆ ಕಾಲೇಜಿನಲ್ಲಿ ನಡೆಸಿದ ಈ ಚಟುವಟಿಕೆ ಸಾಕ್ಷಿಯಾಗಿದೆ ಎಂದರು.
ಕ್ರೀಡಾ ವಿಭಾಗದ ಕಬಡ್ಡಿಯಲ್ಲಿ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿಗಳಾದ ಪ್ರಸಾದ್ ಮತ್ತು ಮಹಮ್ಮದ್ ರಿಜ್ವಾನ್, ದ್ವಿತೀಯ ವಾಣಿಜ್ಯ ವಿಭಾಗದ ಶ್ರೇಯಸ್ ಕೆ.ಎಸ್ ಹಾಗೂ ದೀಪ್ತಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಅರ್ಪಿತಾ ಹೀಗೆ ಒಟ್ಟು 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು, ಕರಾಟೆ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಸಾಧನೆಗೈದು ಹಲವು ಚಿನ್ನದ ಪದಕ, ಬೆಳ್ಳಿ ಪದಕ ಮತ್ತು ಕಂಚಿನ ಪದಕ ಗಳಿಸಿಕೊಂಡಿದ್ದಾರೆ. ಪ್ರಥಮ ವಿಜ್ಞಾನ ವಿಭಾಗದ ಜಿತೇಶ್ ಬಿ.ಎಸ್. ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುವುದ ಕಾಲೇಜಿಗೆ ಸಂಭ್ರಮದ ಸಂಗತಿಯಾಗಿದೆ ಎಂದ ಅವರು
ಹೈಸ್ಕೂಲ್ ದಾಟಿ ಪಿಯುಸಿ ವಿದ್ಯಾಭ್ಯಾಸದಲ್ಲಿರುವ ವಿದ್ಯಾರ್ಥಿಗಳ ಸಾಧನೆ ಕೊಂಡಾಡಬೇಕು. ಇವರಿಗೆ ಇನ್ನಷ್ಟು ಪ್ರೋತ್ಸಾಹ ದೊರೆತಲ್ಲಿ ಸಮಾಜದ ಸಾಧಕರಾಗಿ ಮೂಡಿ ಬರುವುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ ಇನ್ನಷ್ಟು ಹೆಚ್ಚು ಅವಕಾಶಗಳನ್ನು ನೀಡಿ ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ ಜಿತೇಶ್ ಬಿ.ಎಸ್. ತನ್ನ ಅನಿಸಿಕೆ ವ್ಯಕ್ತಪಡಿಸಿ
ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ತುಂಬಾ ಆಸಕ್ತಿ ಇದೆ. ಹಾಗಾಗಿ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿರುವೆ. ಕಾಲೇಜಿನಲ್ಲಿ ವರ್ಕಿಂಗ್ ಮಾಡೆಲ್ ನಡೆದಾಗ ಏನಾದರೂ ಮಾಡಬೇಕೆಂಬ ಆಸಕ್ತಿ ಮೂಡಿತು. ಸಾಮಾನ್ಯ ಸೈಕಲ್ ಗೆ ಹೊಸ ರೂಪ ಕೊಡುವ ಕೆಲಸ ಮಾಡಿದೆ. ಸಂಸ್ಥೆಯ ಅಧ್ಯಕ್ಷರಾದ ಕೆ. ವಸಂತ ಬಂಗೇರರು ನನ್ನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಗತ್ಯ ನೆರವು ಮತ್ತು ಪ್ರೋತ್ಸಾಹ ನೀಡಿದ್ದಾರೆ. ಇದು ನನಗೆ ಇನ್ನೂ ಏನಾದರೂ ಮಾಡಬೇಕೆಂಬ ಮನಸ್ಸು ಬೆಳೆಸಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.