ವಿಡಿಯೋ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ:ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲು:

 

ಬೆಳ್ತಂಗಡಿ : ವಿವಾಹಿತ ಯುವಕನೊಬ್ಬ ಧರ್ಮಸ್ಥಳದ ಕಾಡಿನಲ್ಲಿ ವಿಷ ಸೇವಿಸುತ್ತಾ ವಿಡಿಯೋ ಮಾಡಿ  ಅದನ್ನು ಕುಟುಂಬದವರಿಗೆ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ಯಲ್ಲಿ ನಡೆದಿದೆ,

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮಹಾತ್ಮಾ ಗಾಂಧಿ ವೃತ್ತದ ಪಕ್ಕದ ಗುಡ್ಡದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥ್ ಪುರದ ನಿವಾಸಿ ಸುನಿಲ್(28) ಎಂಬತ ತನ್ನ ಹೀರೋ ಹೊಂಡಾ ಬೈಕ್ ನಲ್ಲಿ  ಸೆ 28 ಬುಧವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಬಂದಿದ್ದಾನೆ ದೇವರ ದರ್ಶನ ಮುಗಿಸಿ ಮಧ್ಯಾಹ್ನದ ನಂತರ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹೋಗಿ ಕುಳಿತು ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ವಿಷ ಪದಾರ್ಥವನ್ನು ಕುಡಿದಿದ್ದಾನೆ ನಂತರ ಅದರ ವಿಡಿಯೋ ಸಮೇತ ಧರ್ಮಸ್ಥಳ ದೇವರ ದರ್ಶನ ಪಡೆದ ಫೋಟೋ , ಮಹಾತ್ಮ ಗಾಂಧಿ ವೃತ್ತದ ಪೋಟೋಗಳನ್ನು ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಕಳುಹಿಸಿದ್ದಾನೆ ಇದನ್ನು ಗಮನಿಸಿದ ಕುಟುಂಬದವರು ಮತ್ತು ಸ್ನೇಹಿತರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ತಕ್ಷಣ ಎಚ್ಚೆತ್ತ ಪೊಲೀಸರು ಕಾಡಿನ ಸುತ್ತಮುತ್ತ ಹುಡುಕಾಟ ನಡೆಸಿದಾಗ ಅರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ತಕ್ಷಣ ಪೊಲೀಸರು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಸುನಿಲ್ ಮಾಲೀಕತ್ವದ ಚಪ್ಪಲ್ ಶಾಪ್ ಹೊಂದಿದ್ದು ಮದುವೆಯಾಗಿ ಮೂರು ತಿಂಗಳ ಮಗು ಕೂಡ ಇದ್ದು , ಗಂಡ ಹೆಂಡತಿ ನಡುವೆ ನಡೆದ ಜಗಳದಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದಾನೆ ಎನ್ನಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

error: Content is protected !!