ಅಳದಂಗಡಿ: ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

 

 

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿಯ ಸುಂಕದಕಟ್ಟೆ ಎಂಬಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ಕಳವುಗೈದಿರುವ ಬಗ್ಗೆ     ಸೆ.23ರಂದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 


ಸುಂಕದಕಟ್ಟೆಯ ನಿವಾಸಿ ಫೌಜಿಯಾ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಫೌಜಿಯಾ ಅವರು ರಾತ್ರಿ ಹತ್ತಿರದ ಸಹೋದರನ ಮನೆಗೆ ಹೋಗಿದ್ದು, ಬೆಳಿಗ್ಗೆ ಮನೆಗೆ ಬಂದು ಗಮನಿಸಿದಾಗ ಬಾಗಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ. ಕಳ್ಳರು ಬೀಗ ಮುರಿದು ಮನೆಯ ಬೆಡ್ ರೂಂನಲ್ಲಿದ್ದ ಕಪಾಟನ್ನು ತೆರದು ಅದರಲ್ಲಿದ್ದ ಸುಮಾರು ಎರಡೂವರೆ ಪವನ್ ತೂಕದ 2 ಚಿನ್ನದ ಸರ, 1 ಪವನ್ ತೂಕದ 2 ಜತೆ ಕಿವಿಯೋಲೆಗಳು, ಸುಮಾರು ಎರಡೂವರೆ ಪವನ್ ತೂಕದ 2 ಬ್ರಾಸ್‌ಲೈಟ್ ಸೇರಿದಂತೆ ರೂ. 25 ಸಾವಿರ ನಗದನ್ನು ದೋಚಿದ್ದಾರೆ. ನಗ-ನಗದು ಸೇರಿದಂತೆ ಕಳವಾದ ಒಟ್ಟು ಮೌಲ್ಯ ರೂ. 2.97 ಲಕ್ಷ ಎಂದು ಅಂದಾಜಿಸಲಾಗಿದ್ದು, ವೇಣೂರು ಪೊಲೀಸ್ ಠಾಣೆ ಉಪ ನಿರೀಕ್ಷಕಿ ಸೌಮ್ಯ ಜೆ. ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!