ಬೆಳ್ತಂಗಡಿ : ಅಂಗಡಿಯಿಂದ ಅಡಿಕೆ ಕಳ್ಳತನ ಪ್ರಕರಣ: ಕಳವುಗೈದ ಅಡಿಕೆ ಸಹಿತ ಆರೋಪಿಯ ಬಂಧನ:

 

 

 

ಬೆಳ್ತಂಗಡಿ :ಕಳ್ಳತನ ಪ್ರಕರಣಗಳು ಬೆಳ್ತಂಗಡಿ ತಾಲೂಕಿನಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಆರೋಪಿಗಳ ಬಗ್ಗೆ ಸುಳಿವು ಸಿಗದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು ಇದೀಗ ಕಳ್ಳತನ ಪ್ರಕರಣವನ್ನು ಭೇದಿಸಿ ಕಳ್ಳತನ ಮಾಡಿದ ಅಡಿಕೆ ಸಮೇತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ನಗರದ ಪಂಚಾಯತ್ ನೀರಿನ ಟ್ಯಾಂಕ್ ಹೋಗುವ ರಸ್ತೆಯಲ್ಲಿರುವ ಸವಣಾಲು ನಿವಾಸಿ ಜಗದೀಶ್ ಗೌಡ ಮಾಲಕತ್ವದ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಎಂಬ ಹೆಸರಿನ ಅಂಗಡಿಯಿಂದ ಸೆಪ್ಟೆಂಬರ್ 17 ಶನಿವಾರದಂದು ಸಂಜೆ ಅಂಗಡಿಗೆ ಬೀಗ ಹಾಕಿಹೋಗಿದ್ದರು ಸೋಮವಾರ ಎಂದಿನಂತೆ ಅಂಗಡಿಯನ್ನು ತೆರೆದು ಎಂದಿನಂತೆ ಅಡಕೆ ಲೋಡ್ ಮಾಡಲು ಹೋದಾಗ ಅಂಗಡಿಯ ಮೇಲ್ಭಾಗದ ಸಿಮೆಂಟ್ ಶೀಟ್ ಜಾರಿದ್ದು ಕಂಡಿದೆ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಹಿಂಭಾಗದಲ್ಲಿ ಕಳ್ಳತನ ಮಾಡಿ ಬಿಟ್ಟು ಹೋದ ಮೂರು ಕಬ್ಬಿಣದ ಏಣಿ ಪತ್ತೆಯಾಗಿತ್ತು ನಂತರ ಅಡಕೆ ಪರಿಶೀಲನೆ ನಡೆಸಿದಾಗ ಅಡಕೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ತಕ್ಷಣ ಮಾಲಕರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಅದರಂತೆ ಪೊಲೀಸರು ಐಪಿಸಿ 454, 457,380 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿ ಬೆಳ್ತಂಗಡಿ ನಗರದ ಸುದೆಮುಗೇರು ನಿವಾಸಿ ಫೈಬರ್‌ ಉದ್ಯಮ ಮಾಡುತ್ತಿರುವ ಸಂತೋಷ್ ಕುಮಾರ್ @ ಸಂತು(28) ಎಂಬತನನ್ನು ಗುರುವಾರ ಸಂಜೆ ಬಂಧಿಸಿ ಆತ ಕಳ್ಳತನ ಮಾಡಿ ಏಳು ಗೋಣಿಯಲ್ಲಿ ಬಚ್ಚಿಟ್ಟಿದ್ದ ಸುಮಾರು ಎಪ್ಪತ್ತು ಸಾವಿರ ಮೌಲ್ಯದ ಒಂದು ಕ್ವಿಂಟಾಲ್ ಐವತ್ತು ಕೆಜಿ ಸುಲಿದ ಅಡಕೆಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಕಳ್ಳತನಕ್ಕೆ ಉಪಯೋಗಿಸಿದ KA-70-H-9084 ನಂಬರಿನ ಡಿಯೋ ಸ್ಕೂಟರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ‌.

*ಆರೋಪಿ ಪತ್ತೆಗೆ ಕಳ್ಳತನವಾದ ಅಂಗಡಿಯವರಿಂದ ಸಹಾಯ:* ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು ಈ ವೇಳೆ ಪೊಲೀಸರು ಸಲಹೆಯಂತೆ ಕಳ್ಳತನ ನಡೆದ ಅಂಗಡಿಯವರು ಸೇರಿ ಬೆಳ್ತಂಗಡಿಯ ಎಲ್ಲಾ ವೆಲ್ಡಿಂಗ್ ಅಂಗಡಿಗೆ ಹೋಗಿ ವಿಚಾರಿಸಿದಾಗ ಅಯ್ಯಪ್ಪ ಗುಡಿ ಹಿಂಭಾಗದ ಒಂದು ಶಾಪ್ ನಲ್ಲಿ ಒಂದು ಏಣಿ ಪತ್ತೆಯಾಗಿತ್ತು ಇದರ ಬಗ್ಗೆ ವಿಚಾರಿಸಿದಾಗ ತಯಾರಿಸಲು ನೀಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆ ನೀಡಿದ್ದರು ಇದನ್ನು ಪರಿಶೀಲನೆ ಮಾಡಿದಾಗ ಕಳ್ಳತನ ಬಗ್ಗೆ ಮಾಹಿತಿ ಸಿಕ್ಕಿದೆ ತಕ್ಷಣ ಆತನ ಸಂಚಾರದ ಬಗ್ಗೆ ಮಾಹಿತಿ ಕಲೆ ಹಾಕಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

error: Content is protected !!