ಕನ್ಯಾಡಿ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ:ಬಿ.ಸಿ. ನಾಗೇಶ್ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬೇಡಿಕೆ ಈಡೇರಿಸುವ ಭರವಸೆ:

 

ಉಜಿರೆ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ  ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

 

ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಗೆ ಕೊಠಡಿಗಳ ಮತ್ತು ಖಾಯಂ ಶಿಕ್ಷಕರ ಕೊರತೆ ನೀಗಿಸುವ ಬಗ್ಗೆ ಸಚಿವರಲ್ಲಿ ಮನವಿ ಮಾಡಿದರು.

 

ಉನ್ನತ ಸಾಧನೆ ಮಾಡಿ ಗೌರವ ಡಾಕ್ಟರೇಟ್ ಪಡೆದ ವಿದ್ಯಾರ್ಥಿನಿ ಶೌರ್ಯ ಎಸ್. ವಿ.ಅವರನ್ನು ಸಚಿವರು ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ,ಧರ್ಮಸ್ಥಳ
ಪಂಚಾಯತ್ ನ ಉಪಾಧ್ಯಕ್ಷ ಶ್ರೀನಿವಾಸ ರಾವ್, ಮುಖ್ಯೋಪಾಧ್ಯಾಯಿನಿ ಪ್ಲೇವಿಯಾ ಡಿ.ಸೋಜ, ಹಳೇವಿಧ್ಯಾರ್ಥಿ ಸಂಘದ ಅಧ್ಯಕ್ಷ ಮನೋಹರ್ ರಾವ್ ಯು. ಬಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂದ ಭಟ್,ಮಾಜಿ ಅಧ್ಯಕ್ಷರುಗಳಾದ ಸುಂದರ ಗೌಡ,ರಾಜೇಂದ್ರ ಆಜ್ರಿ,ಪ್ರಭಾಕರ್ ಗೌಡ ಬೊಲ್ಮ,ಪಂಚಾಯತ್ ಸದಸ್ಯ ವಸಂತ್ ನಾಯ್ಕ್,ಹರೀಶ್ ಸುವರ್ಣ, ಹಳೆವಿದ್ಯಾರ್ಥಿಗಳಾದ ಸುದರ್ಶನ್ ಕೆ.ವಿ. ಕನ್ಯಾಡಿ, ಗಣೇಶ್ ಬಜಿಲ,ಸಚಿನ್ ಗೌಡ ಕಲ್ಮಂಜ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!