ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು: ಅಳದಂಗಡಿಯ ಪಿಲ್ಯ ಬಳಿ ಘಟನೆ:

 

 

 

 

ಬೆಳ್ತಂಗಡಿ:  ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೆ 15  ರಾತ್ರಿ   ಪಿಲ್ಯ ಬಳಿ ನಡೆದಿದೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಯ ಮಸೀದಿಯ ಸಮೀಪ ದ್ವಿಚಕ್ರ ವಾಹನಕ್ಕೆ ಈಚರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ನಿವಾಸಿ‌ ಮೆಕ್ಯಾನಿಕ್ ಪ್ರವೀಣ್ ಆಚಾರ್ಯ (26) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಪ್ರವೀಣ್ ಅವರು ಅಳದಂಗಡಿಯಿಂದ ಕೆಲಸ ಮುಗಿಸಿ ತನ್ನ ಮನೆ ಪಿಲ್ಯ ಕಡೆಗೆ ಹೋಗುತಿದ್ದ ಸಂದರ್ಭ ಎದುರಿನಿಂದ ಬರುತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಜೆ ಸವಾರ ಪ್ರವೀಣ್ ಸ್ಥಳದಲ್ಲಿ ಸಾವನ್ನಪ್ಪಿದ್ದು ಲಾರಿ ಸಹಿತ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಕಟ್ಟೆ ಬಳಿ ಲಾರಿಯನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!