ಬೆಳ್ತಂಗಡಿ: ಅಖಿಲ ಭಾರತ ಸಿವಿಲ್ ಇಂಜಿನಿಯರ್ ಗಳ ಒಕ್ಕೂಟ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಜಂಟಿಯಾಗಿ ಸರ್. ಎಮ್. ವಿಶ್ವೇಶ್ವರಯ್ಯ ಅವರ 162 ನೇ ಜಯಂತಿ ಪ್ರಯುಕ್ತ ‘ಇಂಜಿನಿಯರ್ಸ್ ಡೇ’ ಆಚರಣೆಯು ಸೆಪ್ಟಂಬರ್ 15 ರಂದು ಉಜಿರೆಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಲಿದೆ. ಎಂದು ಸಂಘದ ಅಧ್ಯಕ್ಷ ಜಗದೀಶ್ ಪ್ರಸಾದ್ ತಿಳಿಸಿದರು.
ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನ 3 ಗಂಟೆಗೆ ಬೆಳ್ತಂಗಡಿ ಹಳೇಕೋಟೆಯಿಂದ ಉಜಿರೆಯವರೆಗೆ ಬೃಹತ್ ವಾಹನ ಜಾಥ ಹಮ್ಮಿಕೊಳ್ಳಲಾಗಿದೆ. ಸಂಜೆ 5 ರಿಂದ ಸಭಾಭವನದಲ್ಲಿ ಸಂಘದ ಸದಸ್ಯರಿಗೆ ತಾಂತ್ರಿಕ ಮಾಹಿತಿ ಕಾರ್ಯಗಾರ ಏರ್ಪಡಿಸಲಾಗಿದೆ. ಕಾರ್ಯಾಗಾರವನ್ನು ಮಂಗಳೂರಿನ ಖ್ಯಾತ ಇಂಜಿನಿಯರ್ ಅನಿರುದ್ಧ್ ರಾವ್ ನಡೆಸಿಕೊಡಲಿದ್ದಾರೆ.ಸಂಜೆ 7 ರಿಂದ ರೋಟರಿ ಕ್ಲಬ್ ನ ಸಹಬಾಗಿತ್ವದಲ್ಲಿ ತಾಲೂಕಿನ ಇಬ್ಬರು ಹಿರಿಯ ಇಂಜಿನಿಯರ್ ಗಳಾದ ನಾರಾಯಣ ಭಟ್ ಮತ್ತು ಸೀತಾರಾಮ ಶೆಟ್ಟಿ ಇವರನ್ನು ಗೌರವಿಸಲಾಗುವುದು.ಕಾರ್ಯಕ್ರಮದಲ್ಲಿ ಪುತ್ತೂರಿನ ರಾಜ್ಯ ಪ್ರಶಸ್ತಿ ವಿಜೇತ ಮುರಳಿ ಸಹೋದರರ ಡ್ಯಾನ್ಸ್ ಕ್ರೂ ಹಾಗೂ ವಿದುಷಿ ಪೂಜಾ ಪ್ರಶಾಂತ್ ಮತ್ತು ವಿದುಷಿ ಪ್ರತೀಕ್ಷ ಇವರು ಭರತನಾಟ್ಯ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮ ಭಟ್, ಕಾರ್ಯದರ್ಶಿ ರಕ್ಷಾ ರಾಷ್ನೇಶ್, ಎಸಿಸಿಇ( ಐ)ಕಾರ್ಯದರ್ಶಿ ವಿದ್ಯಾಕುಮಾರ್, ಕೋಶಾಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು.