ಅಧಿಕಾರ ನೀಡಿದ ಪ್ರಾರಂಭದಲ್ಲೇ ಭ್ರಷ್ಟರ ಬೇಟೆಗೆ ಇಳಿದ ಲೋಕಾಯುಕ್ತ : ಬಿಬಿಎಂಪಿ ಕಚೇರಿ ಮೇಲೆ ದಾಳಿ ಹಣ ಸಹಿತ ಜಂಟಿ ಆಯುಕ್ತ ಬಲೆಗೆ:

 

ಬೆಂಗಳೂರು: ಅಧಿಕಾರ ಸಿಕ್ಕಿದ ಪ್ರಾರಂಭದಲ್ಲೇ   ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು  ಭ್ರಷ್ಟರ ಬೇಟೆಗೆ ಇಳಿದಿದೆ. ಪಶ್ಚಿಮ ವಿಭಾಗ ಬಿಬಿಎಂಪಿ ಕಚೇರಿ ಮೇಲೆ ಇಂದು ಲೋಕಾಯುಕ್ತ ಸಂಸ್ಥೆ ದಾಳಿ ಮಾಡಿದೆ. ಈ ವೇಳೆ ಜಂಟಿ ಆಯುಕ್ತ ಶ್ರೀನಿವಾಸ್ ಅವರು 4 ಲಕ್ಷ ಹಣದ ಸಹಿತ ಸಿಕ್ಕಿಬಿದ್ದಿದ್ದಾರೆ.

ಖಾತೆ ಬದಲಾವಣೆ ವಿಚಾರಕ್ಕೆ ಜಂಟಿ ಆಯುಕ್ತ ಶ್ರೀನಿವಾಸ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಹಣ ಪಡೆಯುವಾಗ ಆಯುಕ್ತರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಲ್ಲೇಶ್ವರಂ ಬಳಿ ಇರುವ ಬಿಬಿಎಂಪಿ ಕಚೇರಿ ಮೇಲೆ ಲೋಕಾಯುಕ್ತ ಎಸ್.ಪಿ ಶ್ರೀನಾಥ್ ಮಹದೇವ ಜೋಶಿ ನೇತೃತ್ವದಲ್ಲಿ 8 ಜನ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.ಎಸಿಬಿ ಸ್ಥಾಪನೆ ಬಳಿಕ ಲೋಕಾಯುಕ್ತ ಸಂಸ್ಥೆ ಶಕ್ತಿ ಕಳೆದುಕೊಂಡಿತ್ತು. ಇದೀಗ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಮರುಸ್ಥಾಪಿಸಲಾಗಿದೆ. ಈ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆ ಕಾರ್ಯಾಚರಣೆಗೆ ಇಳಿದಿದೆ. ಇಂದು ಮೊದಲ ದಾಳಿ ಮಾಡಿದೆ.

error: Content is protected !!