ಲಾಯಿಲ:ಪಡ್ಲಾಡಿ ಮೊಸರುಕುಡಿಕೆ ಉತ್ಸವ ಕಾರ್ಯಕ್ರಮ: ಗ್ರಾಮದ ಸಾಧಕರಿಗೆ ಹಾಗೂ ವಿಶೇಷ ಸೇವೆಗೈದವರಿಗೆ ಗೌರವಾರ್ಪಣೆ: ಶಾಸಕ ಹರೀಶ್ ಪೂಂಜ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ:

 

ಬೆಳ್ತಂಗಡಿ:ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಯಿಲ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 31 ನೇ ವರ್ಷದ ಮೊಸರು ಕುಡಿಕೆ ಉತ್ಸವವು ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಆಗಸ್ಟ್ 18 ಗುರುವಾರ ಲಾಯಿಲ ಗ್ರಾಮದ ಪಡ್ಲಾಡಿ ಶಾಲಾ ವಠಾರದಲ್ಲಿ ನಡೆಯಿತು.

 

ಬೆಳಿಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಸಲ್ದಾನ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ನಿರಂಜನ್ ಜೈನ್ ಪುದ್ದೋಟ್ಟು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.‌ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ ಅಧ್ಯಕ್ಷ ಅಜಯ್, ಪಡ್ಲಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಭಾಗವಹಿಸಿದ್ದರು.ನಂತರ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಿತು.‌ ಶಾಸಕ ಹರೀಶ್ ಪೂಂಜ , ಬೆಸ್ಟ್ ಪೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಂಜೆ ಸಮಾರೋಪ ಸಮಾರಂಭದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಬಗ್ಗೆ ಜೂನಿಯರ್ ಕಾಲೇಜು ಅಧ್ಯಾಪಕ ಶೀನಾ ನಾಡೋಳಿಯವರು ಮಾತನಾಡುತ್ತ ಸರ್ವಧರ್ಮಿಯರು ಒಟ್ಟಾಗಿ ಸೇರಿಕೊಂಡು ಮಾಡುವ ಹಬ್ಬ ಮೊಸರು ಕುಡಿಕೆ ಉತ್ಸವವಾಗಿದೆ.

 

 

 

ಇದನ್ನು ಈಗಲೂ ಕೆಲವು ಕಡೆಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈಗಿನ ಯುವ ಜನತೆ ಹಿರಿಯರ ಈ ಸಂಸ್ಕಾರವನ್ನು ಬೆಳೆಸಿಕೊಂಡು ಹೋಗಬೇಕು ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ. ಶಿರ್ಲಾಲ್ ಮಾತನಾಡಿ ಜಾತಿ ಧರ್ಮ ಮರೆತು ಅತ್ಯಂತ ಗೌರವಯುತವಾಗಿ ಭಕ್ತಿಯಿಂದ ಆಚರಿಸುವ ಕೃಷ್ಣ ಜನ್ಮಾಷ್ಟಮಿಯು ಹಬ್ಬಗಳಲ್ಲಿ ತುಂಬಾ ಮಹತ್ವವನ್ನು ಪಡೆದಿದೆ. ಇಂತಹ ಕಾರ್ಯಕ್ರಮಗಳಲ್ಲಿ ರಾಷ್ಟ್ರ ರಾಜ್ಯ ಮಟ್ಟದಲ್ಲಿ ಗುರತಿಸಿಕೊಂಡಿರುವ ಗ್ರಾಮದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಅರ್ಥ ತುಂಬಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ ಎಂದರು.

 

 

 

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಕಳೆದ 2ವರ್ಷಗಳಿಂದ ಮಹಾಮಾರಿ ಕೊರೊನಾದಿಂದಾಗಿ ಮೊಸರು ಕುಡಿಕೆ ಉತ್ಸವ ನಡೆದಿರಲಿಲ್ಲ ಅದರೆ ಈ ಬಾರಿ ವಿವಿಧ ಕಾರ್ಯಕ್ರಮಗಳ ಮೂಲಕ ನಡೆದ ಈ ಮೊಸರುಕುಡಿಕೆ ಉತ್ಸವವು ಯಶಸ್ವಿಯಾಗಿದೆ.ಇದಕ್ಕೆ ಈ ಭಾಗದ ಯುವಕರ ಶ್ರಮ ಹಾಗೂ ಜಾತಿ ಧರ್ಮ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ನಮ್ಮ ಹಬ್ಬ ಎಂಬಂತೆ ಸಹಕರಿಸಿದ್ದರಿಂದ ಇಷ್ಟೊಂದು ಚೆನ್ನಾಗಿ ಕಾರ್ಯಕ್ರಮ ಮೂಡಿಬರಲು ಕಾರಣವಾಯಿತು .ಎಲ್ಲರಿಗೂ ಈ ಮೂಲಕ ಧನ್ಯವಾದಗಳು ಎಂದರು.

 

 

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು. ನಂತರ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಆರ್.‌ಸದಸ್ಯೆ ಜಯಂತಿ ಅನ್ನಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ ವಲಯ ಮೇಲ್ವಿಚಾರಕ ಸುಶಾಂತ್, ಪಡ್ಲಾಡಿ ಎಸ್. ಡಿ.ಎಂ. ಸಿ ಆಧ್ಯಕ್ಷ ಸೂರಪ್ಪ , ಗಣೇಶೋತ್ಸವ ಸಮಿತಿ ಲಾಯಿಲ ಅಧ್ಯಕ್ಷ ಭೋಜರಾಜ್ ಪ್ರಗತಿನಗರ,ಪ್ರಗತಿಪರ ಕೃಷಿಕರಾದ ಜೋಕಿಂ ಸಿಕ್ವೇರಾ, ಅಂಬೇಡ್ಕರ್ ಭವನ ಉಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಎಲ್.ಉತ್ಸಾಹಿ ಯುವಕ ಮಂಡಲದ ಅಧ್ಯಕ್ಷ ವಿನಯ್ ಎಂ.ಎಸ್ ಮೊಸರು ಕುಡಿಕೆ ಸಮಿತಿ ಕಾರ್ಯದರ್ಶಿ ಅನಿಲ್ ವಿಕ್ರಂ ಡಿಸೋಜ, ಕೋಶಾಧಿಕಾರಿ ಸಂತೋಷ್ ಕುಮಾರ್, ಜೊತೆ ಕಾರ್ಯದರ್ಶಿ ಕೃಷ್ಣ ಎಲ್, ಜೊತೆ ಕೋಶಾಧಿಕಾರಿ ಹರೀಶ್ ಕುಮಾರ್ ಎಲ್ ಉಪಸ್ಥಿತರಿದ್ದರು. ಜಯಾನಂದ ಅಂಕಾಜೆ ಹಾಗೂ ವಿನಯ್ ಪಡ್ಲಾಡಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!