ನಡ: ಕ್ವಾಲೀಸ್ ವಾಹನದಲ್ಲಿ ಅಕ್ರಮ ಗೋ ಸಾಗಾಟ: ಪೊಲೀಸರ ಮೇಲೆಯೇ ವಾಹನ ಚಲಾಯಿಸಲು ಯತ್ನ: ಸ್ಥಳೀಯರ ಸಹಕಾರದಲ್ಲಿ 3 ಮಂದಿ ಗೋ ಕಳ್ಳರನ್ನು ಹಿಡಿದ ಪೊಲೀಸರು :

 

 

 

ಬೆಳ್ತಂಗಡಿ: ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ಬು ಸಾಗಿಸುತ್ತಿದ್ದ ವಾಹನವನ್ನು ಸ್ಥಳೀಯರ ಸಹಕಾರದಲ್ಲಿ  ಪೊಲೀಸರು  ಹಿಡಿದ ಘಟನೆ ನಡ ಗ್ರಾಮದ ನರಸಿಂಹ ಗಡ ರಸ್ತೆಯಲ್ಲಿ ನಡೆದಿದೆ.ಕ್ವಾಲೀಸ್ ವಾಹನವೊಂದು ಸಂಶಯಸ್ಪದವಾಗಿ ಸಂಚಾರಿಸುತಿದ್ದ ಬಗ್ಗೆ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಪೊಲೀಸರ ಮೇಲೆಯೇ ವಾಹನ ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಸ್ಥಳೀಯರ ಸಹಕಾರದಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ . ಆಗ ಚಾಲಕ ತಪ್ಪಿಸಿಕೊಂಡಿದ್ದು 3 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ.ವಾಹನದಲ್ಲಿ 5 ಗೋವುಗಳು ಹಿಂಸಾತ್ಮಕ ರೀತಿಯಲ್ಲಿ ಇದ್ದು ಅದನ್ನು ಗುರುವಾಯನಕೆರೆ ಬಳಿಯ ಪಿಲಿಚಂಡಿ ಕಲ್ಲು ಎಂಬಲ್ಲಿಯ ಕಸಾಯಿಖಾನೆಗೆ ಸಾಗಿಸಲು ಯತ್ತಿಸುತಿದ್ದರು . ಒಳ ರಸ್ತೆಯ ಮೂಲಕ ಲಾಯಿಲ ಮುಂಡೂರು ರಸ್ತೆಯಲ್ಲಿ ಸಾಗುವವರಿದ್ದರು ಎಂದು ತಿಳಿದು ಬಂದಿದೆ.

error: Content is protected !!