ಕುಕ್ಕಾವು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷರಾಗಿ: ಸುಶ್ಮಿತಾ ಬಿ.ಕೆ. ಕಾರ್ಯದರ್ಶಿಯಾಗಿ: ತುಳಸಿ ದಿನೇಶ್ ಕುಕ್ಕಾವು ಆಯ್ಕೆ:

 

 

ಬೆಳ್ತಂಗಡಿ : ಇಲ್ಲಿನ ಕುಕ್ಕಾವು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ಸುಶ್ಮಿತಾ ಬಿ.ಕೆ. ಕಬ್ಬಿನಹಿತ್ತಲು,. ಕಾರ್ಯದರ್ಶಿಯಾಗಿ ತುಳಸಿ ದಿನೇಶ್ ಕುಕ್ಕಾವು ಆಯ್ಕೆಯಾಗಿದ್ದಾರೆ.

 

 

                           ಸುಶ್ಮಿತಾ ಬಿ.ಕೆ

 

ಸಮಿತಿಯ ಗೌರವಾಧ್ಯಕ್ಷರಾಗಿ ಯು. ರೂಪಾ ಗೋಪಾಲ ಗೌಡ ವಲಂಬ್ರ, ಕೋಶಾಧಿಕಾರಿಯಾಗಿ ವಿಜಯ ಕುಕ್ಕಾವು, ಉಪಾಧ್ಯಕ್ಷರುಗಳಾಗಿ ರೇಷ್ಮಾ ಕೊಲ್ಪೆ, ಸತ್ಯವತಿ ಕಲ್ಲೋಲೆ, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ ಚಂದಯ್ಯ ಕುಕ್ಕಾವು, ಸಲಹೆಗಾರರಾಗಿ ವತ್ಸಲಾ ಶಿವಾನಂದ ರಾವ್ ಕಕ್ಕೆನೇಜಿ, ಶಕುಂತಲಾ ಅಶೋಕ ಗೌಡ ಕಡ್ತಿಕುಮೇರು, ವಸಂತಲಕ್ಷ್ಮೀ ಬಜತ್ತಬೆಟ್ಟು, ಪ್ರೇಮ ಪಿಲ್ಯಂದ್ರ, ಗಿರಿಜಾ ಪೆಲತ್ತಡಿ, ಸದಸ್ಯರುಗಳಾಗಿ ಗೀತಾ ಮಾಂಜ, ಭಾರತಿ ಪಿಲತ್ತಡಿ, ಅಪ್ಪಿ ಮದ್ರೆಂಗಿ, ಶಾಂತ ಮಾಂಜ, ಸುಮಲತ ಪಾದೆ, ಹೊನ್ನಮ್ಮ ಆಲಂಗಾವು, ಭೂಮಿಕಾ ಕೊಂಬಿತ್ಯಾರು, ನಳಿನಿ ದೈಪಿತ್ತಿಲು ಆಯ್ಕೆಯಾಗಿದ್ದಾರೆ.

 

                 ತುಳಸಿ ದಿನೇಶ್ ಕುಕ್ಕಾವು

 

ಆ. 5 ರಂದು ವರಮಹಾಲಕ್ಷ್ಮೀ ಪೂಜೆ

ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನ ಸಭಾಂಗಣದಲ್ಲಿ 8ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.5ರಂದು ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಪೂಜೆ ಆರಂಭವಾಗಲಿದ್ದು, 11 ಕ್ಕೆ ಮಂಗಳಾರತಿ ಹಾಗೂ 11.15ಕ್ಕೆ ದೇವಳದ ಶ್ರೀ ಸದಾಶಿವ ದೇವರ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಗಂಟೆ 11.30 ರಿಂದ 12 ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ಭಾಗವಹಿಸಲಿದ್ದಾರೆ. 1 ಗಂಟೆಗೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ.
ಪೂಜೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ಬೆಳಿಗ್ಗೆ ಗಂಟೆ 9 ಕ್ಕೆ ದೇವಸ್ಥಾನದಲ್ಲಿ ಹಾಜರಿರಬೇಕು. ಪೂಜಾ ಶುಲ್ಕ ರೂ. 101, 1 ಸೇರು ಬೆಳ್ತಿಗೆ ಅಕ್ಕಿ, 2 ತೆಂಗಿನಕಾಯಿ, ವೀಳ್ಯದೆಳೆ, 2 ಅಡಿಕೆ, 5 ಬಾಳೆ ಎಲೆ, ಕೌಳಿಗೆ ಸೌಟು ಅಥವಾ ಲೋಟ, ಚಮಚ, ಬಿಳಿ ಹೂ ಹಾಗೂ ತುಳಸಿ ತರಬೇಕು. ಹೆಚ್ಚಿನ ಮಾಹಿತಿಗಾಗಿ 7022711348 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

error: Content is protected !!