ಗುರುವಾಯನಕೆರೆ ಖಾಸಗಿ ಕಾಲೇಜಿನಿಂದ ನಿಯಮ ಮೀರಿ ಕಾರ್ಯಕ್ರಮ ಕಾಲೇಜು ಮುಖ್ಯಸ್ಥರಿಂದ ಬೆಳ್ತಂಗಡಿ ಜನತೆ ಬಗ್ಗೆ ಉಡಾಫೆ ಮಾತು

 

 

 

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆಯುತ್ತಿದ್ದು ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈಗಾಗಲೇ ಜಿಲ್ಲೆಯಾದ್ಯಾಂತ ಮುನ್ನೆಚ್ಚರಿಕೆಗಾಗಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಾಗಿದ್ದು ಸುರಕ್ಷತೆ ದೃಷ್ಟಿಯಿಂದ ಸಂಜೆ 6 ರಿಂದ ಎಲ್ಲಾ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ ಗುರುವಾಯನಕೆರೆಯ ಖಾಸಗಿ ಕಾಲೇಜೊಂದು ಕಾನೂನನ್ನು ಗಾಳಿಗೆ ತೂರಿ ಶಾಲಾ ಕಾರ್ಯಕ್ರಮವನ್ನು ಯಾವುದೇ ಅನುಮತಿ ಇಲ್ಲದೇ ಬೆಳ್ತಂಗಡಿ ನಗರದ ಸಭಾಭವನದಲ್ಲಿ ಆಯೋಜಿಸಿತ್ತು.

 

 

 

ಹಾಗಿದ್ದರೂ ಪರವಾಗಿರಲಿಲ್ಲ, ಜಿಲ್ಲಾಧಿಕಾರಿ ಸೂಚನೆಯಂತೆ 6 ಗಂಟೆಗೆ ಕಾರ್ಯಕ್ರಮ ಕೊನೆಗೊಳಿಸಬೇಕಿತ್ತು. ಕಾರಣ ಅಲ್ಲಿ ನೂರಾರು ಮಕ್ಕಳು ನೆರೆದಿದ್ದರು. ಅದರ ಪರಿಜ್ಞಾನವೇ ಇಲ್ಲದ ಪ್ರಾಂಶುಪಾಲರು ಹಾಗೂ ಸಿಬಂದಿ ಕಾರ್ಯಕ್ರಮ ಮುಂದುವರೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.‌

ಗುರುವಾಯನಕೆರೆಯ ಎಕ್ಷೆಲ್ ಎಂಬ ವಿದ್ಯಾ ಸಂಸ್ಥೆಯು ಪುಸ್ತಕ ಬಿಡುಗಡೆ ಹಾಗೂ ಶಾಲಾ ಮಕ್ಕಳ ಡ್ಯಾನ್ಸ್ ಕಾರ್ಯಕ್ರಮವನ್ನು ಸಂಜೆ 4 ಗಂಟೆಯಿಂದ ತನ್ನ ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಕರೆತಂದ್ದು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ‌ ನಗರ ಪಂಚಾಯತ್ ವ್ಯಾಪ್ತಿಯ ಖಾಸಗಿ ಕಲಾಭವನದಲ್ಲಿ ಆಯೋಜಿಸಿದ್ದು ಈ ಬಗ್ಗೆ ನಗರ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ.‌

ನಗರ ಪಂಚಾಯಿತಿ ಮುಖ್ಯಾಧಿಕಾರಿಗಳಲ್ಲಿ ಅನುಮತಿ ನೀಡುವ ಬಗ್ಗೆ ಕಾಲೇಜು ಮುಖ್ಯಸ್ಥರು ಕೇಳಿಕೊಂಡಿದ್ದು ಅದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ, ಅದರೆ ಕಾಲೇಜಿನ ಮುಖ್ಯಸ್ಥರು ನಿಯಮ ಗಾಳಿಗೆ ತೂರಿ ಕಾರ್ಯಕ್ರಮವನ್ನು ಮಾಡಿದ್ದಾರೆ.ಎಂಬ ಮಾಹಿತಿ ತಿಳಿದ ಸಾರ್ವಜನಿಕರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜಮಾಯಿಸಿದ್ದು ಈ ಬಗ್ಗೆ ಮಾಹಿತಿ ಪಡೆದ ನ.ಪಂ. ಉಪಾಧ್ಯಕ್ಷ ಜಯಾನಂದ ಗೌಡ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಕಾರ್ಯಕ್ರಮ 6 ರ ಬಳಿಕ ಮಾಡದಂತೆ ಸ್ಥಳಕ್ಕೆ ಆಗಮಿಸಿ ಆಯೋಜಕರಲ್ಲಿ ಕಾರ್ಯಕ್ರಮ ನಿಲ್ಲಿಸಿ ಎಂದು ಹೇಳಿದರೂ ಇದನ್ನು ಕಿವಿಗೆ ಹಾಕಿ ಕೊಳ್ಳದೆ ಕಾರ್ಯಕ್ರಮ ಮುಂದುವರಿಸಿದಾಗ ಸಾರ್ವಜನಿಕರು ಇನ್ನಷ್ಟು ಆಕ್ರೋಶ ಭರಿತರಾದರು.

ಈ ಸಂದರ್ಭದಲ್ಲಿ ಮಾದ್ಯಮದ ಗಮನಕ್ಕೂ ಸ್ಥಳೀಯರು ದೂರು ನೀಡಿದರ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದಾಗ ಕಾಲೇಜಿನ ಮುಖ್ಯಸ್ಥರು ರೇಗಾಡಿ ಬೆಳ್ತಂಗಡಿಯಲ್ಲಿ ಕಾಲೇಜು ಸ್ಥಾಪಿಸಿದ್ದು ನಮ್ಮ ದೊಡ್ಡ ತಪ್ಪು  ಎಂಬ ಉತ್ತರವನ್ನು ಅವರನ್ನು ಪ್ರಶ್ನೆ ಮಾಡಿದವರಿಗೆ ಉಡಾಫೆ ರೀತಿಯಲ್ಲಿ ಉತ್ತರಿಸಿದ್ದಾರೆ.

ಈ ಬಗ್ಗೆ ಪುತ್ತೂರು ಸಹಾಯಕ ಆಯುಕ್ತರಿಗೂ ದೂರು ಹೋದ ಹಿನ್ನೆಲೆ ಪೊಲೀಸರು ಕಾರ್ಯಕ್ರಮ ರದ್ದು ಮಾಡುವಂತೆ ತಾಕೀತು ಮಾಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ವೃತ್ತನಿರೀಕ್ಷಕ ಶಿವಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು.
ಕೊನೆಯಲ್ಲಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ರಾತ್ರಿ 8 ಗಂಟೆವರೆಗೂ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಕಾಲೇಜು ಆವರಣಕ್ಕೆ ಬಿಟ್ಟಿದ್ದಾರೆ. ಈ ಹಿಂದೆ ಮಳೆ ತೀವ್ರವಾಗಿದ್ದಾಗ ಎಲ್ಲ ಖಾಸಗಿ ಸರಕಾರಿ ಶಾಲೆ ರಜೆ ಘೋಷಿಸಿದಾಗಲು ಇದೇ ಕಾಲೇಜು ತರಗತಿ ನಡೆಸಿತ್ತು. ಜಿಲ್ಲೆಯ ಎಲ್ಲ ಶಾಲೆಗಳಿಗೆ ಅನ್ವಯವಾಗುವ ಜಿಲ್ಲಾಧಿಕಾರಿಗಳ ಆದೇಶ ಮಾತ್ರ ಈ ಶಾಲೆಗೆ ಅನ್ವಯವಾಗುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ‌.ಹೋಟೆಲ್ ಸಹಿತ ಬಹುಪಾಲು ತಿಂಡಿ ತಿನಸು ಅಂಗಡಿಗಳೇ ಬಂದ್ ಗೆ ಸಕರಾತ್ಮಕವಾಗಿ ಸ್ಪಂದಿಸಿದರೂ ಈ ಕಾಲೇಜಿನ ಆಡಳಿತ ಮಾತ್ರ ಉಡಾಫೆ ವರ್ತನೆ ತೋರಿದೆ ಅದಲ್ಲದೇ ಪರಿಸ್ಥಿತಿ ಸರಿ ಇಲ್ಲದ ಈ ಸಮಯದಲ್ಲಿ  ಏನಾದರೂ ಅನಾಹುತ ನಡೆದಲ್ಲಿ ಜವಾಬ್ದಾರಿ ಯಾರು  ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!