ಸ್ಮಾಲೆಸ್ಟ್ ಡಾಟ್ ಮಂಡಲ , ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆ: ಲಾಯಿಲದ ಕನ್ನಾಜೆ ಸುರಕ್ಷಾ ಆಚಾರ್ಯ ಮತ್ತೊಂದು ಸಾಧನೆ:

 

ಬೆಳ್ತಂಗಡಿ:ಸ್ಮಾಲೆಸ್ಟ್ ಡಾಟ್ ಮಂಡಲ (ಅತೀ ಚಿಕ್ಕ ಡಾಟ್ ಮಂಡಲ) ಆರ್ಟ್‌‌ ಬಿಡಿಸಿರುವ ಸುರಕ್ಷಾ ಆಚಾರ್ಯ ಕನ್ನಾಜೆ ಅವರ ಹೆಸರು ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದೆ.
ಕೇವಲ ಒಂದು ಗಂಟೆ ಅಂತರದಲ್ಲಿ 140 ಚುಕ್ಕಿ ಬಳಸಿ 4 ಸೆಂ. ಮೀ ಗಾತ್ರದಲ್ಲಿ ಅತೀ ಚಿಕ್ಕ ಡಾಟ್ ಮಂಡಲವನ್ನು ರಚಿಸಿ ಸಾಧನೆ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕನ್ನಾಜೆ ಚಂದ್ರಶೇಖರ ಆಚಾರ್ಯ ಮತ್ತು ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಸುರಕ್ಷಾ, ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.

ಇದೇ ರೀತಿ ಅತೀ ಚಿಕ್ಕ ಡಾಟ್ ಮಂಡಲ ಆರ್ಟ್ ಈ ಹಿಂದೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ ಪಡೆದುಕೊಂಡಿತ್ತು.

error: Content is protected !!