ವಿದ್ಯಾರ್ಥಿಗಳು ದೂರದೃಷ್ಟಿ ಮನೋಭಾವನೆಯನ್ನು ಹೊಂದಿರಬೇಕು:ಫಾ. ಜೆರೋಮ್ ಡಿಸೋಜ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನೂತನ ಮಂತ್ರಿ ಮಂಡಲ ಉದ್ಘಾಟನೆ:

 

 

ಬೆಳ್ತಂಗಡಿ: ಶಾಲೆಯ ಎಲ್ಲಾ ಚಟುವಟಿಕೆಗಳು ಶಿಸ್ತು ಹಾಗೂ ಜವಾಬ್ದಾರಿಯುತವಾಗಿ ಮುನ್ನಡೆಯಲು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ಮುಖ್ಯ ಎಂದು  ಮಡಂತ್ಯಾರು ಕಾಲೇಜಿನ ಪ್ರಾಂಶುಪಾಲ ವಂ. ಫಾ. ಜೆರೋಮ್ ಡಿಸೋಜ ಹೇಳಿದರು.

 

ಅವರು ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿ ಮಂಡಲದ ಸದಸ್ಯರಿಗೆ ಜುಲೈ 19 ರಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

 

ವಿದ್ಯಾರ್ಥಿಗಳು ದೂರ ದೃಷ್ಟಿ ಮನೋಭಾವನೆಯನ್ನು ಹೊಂದಿ ತಮ್ಮ ಗುರಿಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಬೇಕೆಂದು ಶುಭ ಹಾರೈಸಿದರು.

 

2022-23ನೇ ಸಾಲಿನ ಮಂತ್ರಿಮಂಡಲವನ್ನು ಜೂನ್ 21ರಂದು ಗುಪ್ತ ಮತದಾನದ ಮೂಲಕ ಚುನಾವಣೆ ನಡೆಸಿ ಆಯ್ಕೆ ಮಾಡಲಾಯಿತು. ಇವರಿಗೆ ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಫಾ. ಕ್ಲಿಫರ್ಡ್ ಪಿಂಟೋರವರು ಪ್ರತಿಜ್ಞಾವಿಧಿಯನ್ನು ಬೋಧಿಸಿ, ಮಂಡಲದ ಸದಸ್ಯರು ಇತರರಿಗೆ ಮಾದರಿಯಾಗಿದ್ದು ತಮ್ಮ ಕರ್ತವ್ಯಗಳನ್ನು ಪಾಲಿಸಿ ಶಾಲಾ ವ್ಯವಸ್ಥೆಯನ್ನು ಶಿಸ್ತು ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಕಥೆಯ ಮೂಲಕ ಕಿವಿ ಮಾತನ್ನು ನೀಡಿ ಶುಭ ಹಾರೈಸಿದರು.
ವಿದ್ಯಾರ್ಥಿ ಮೆಲ್ಸ್ಟನ್ ಡಿಸೋಜ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ವಿಯೋನ ರೇಗೊ ವಂದಿಸಿ, ಸ್ವೀಡಲ್ ವಾಸ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯಾದ ಶ್ರೀಮತಿ ಸರಿತಾ ರೊಡ್ರಿಗಸ್ ಸಹಕರಿಸಿದರು.

error: Content is protected !!