ಬೆಳ್ತಂಗಡಿ:ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆ-ಚಾರ್ಮಾಡಿ ತನಕ ನಡೆಯಲಿದ್ದು,718 ಕೋಟಿ ರೂ. ಅನುದಾನ ಮಂಜೂರು ಗೊಂಡಿದೆ.ರಸ್ತೆ
ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ ಬಾರಿ ಮಾಡಿದ ಸಮೀಕ್ಷೆಗಳು ನಡೆದಿದ್ದು ಇದು ಅಪೂರ್ಣವಾಗಿದ್ದು ಸರಕಾರದ ಆದೇಶದಂತೆ ಹೊಸ ಸಮೀಕ್ಷೆ ಪ್ರಾರಂಭವಾಗಿದೆ.
ರಸ್ತೆಯನ್ನು ಹೆಚ್ಚು ನೇರ ಗೊಳಿಸುವ ಉದ್ದೇಶದಿಂದ ಹೊಸ ಸಮೀಕ್ಷೆ ಆದೇಶಿಸಲಾಗಿದ್ದು ಈಗಾಗಲೇ ಸರ್ವೇ ಕಾರ್ಯ ಪ್ರಾರಂಭವಾಗಿದೆ.ಈ ಹಿಂದೆ ಈ ಪ್ರದೇಶದಲ್ಲಿ 35 ಕಿ.ಮೀ.ರಸ್ತೆ ಗುರುತಿಸಲಾಗಿದ್ದು ಅದಷ್ಟೂ ತಿರುವುಗಳು ತೆಗದು ನೇರಗೊಳಿಸುವ ಕಾರಣ 33.1ಕಿ.ಮೀ.ಗೆ ಕಡಿಮೆಗೊಳ್ಳಲಿದೆ.
ಜುಲೈ 11ರಂದು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ 10 ಕಂಪನಿಗಳು ಭಾಗವಹಿಸಿವೆ. ಶೀಘ್ರವೇ ಟೆಂಡರ್ ಪೂರ್ಣಗೊಳ್ಳಲಿದ್ದು ನವೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂಬ ಮಾಹಿತಿ ಈಗಾಗಲೇ ಲಭಿಸಿದೆ.