ಗ್ರಾಮಗಳ ಅಭಿವೃದ್ಧಿಯ ಮೂಲಕ ನವ ಬೆಳ್ತಂಗಡಿಯ ಸಂಕಲ್ಪ ಪೂರ್ಣ : ಶಾಸಕ ಹರೀಶ್ ಪೂಂಜ ಲಾಯಿಲ ಬಿಜೆಪಿ ಶಕ್ತಿ ಕೆಂದ್ರದಿಂದ ವಿಕಾಸ ಹಬ್ಬ

 

 

 

ಬೆಳ್ತಂಗಡಿ:ಪ್ರಧಾನಿಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು
ಒಪ್ಪಿಕೊಳ್ಳುವ ಹಂತದಲ್ಲಿ ನಾವಿದ್ದೇವೆ. ಈ ಮೂಲಕ ಭಾರತೀಯ ಜನತಾಪಾರ್ಟಿ ಸಿದ್ಧಾಂತ ಆದರ್ಶಗಳಿಂದಾಗಿ ಜಗದ್ವಂಧ್ಯಾ ಭಾರತ ಕಲ್ಪನೆ ಸಾಕಾರಗೊಂಡಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು‌.

 

 

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಲಾಯಿಲ ಗ್ರಾ.ಪಂ.ಗೆ ಶಾಸಕರು 17.13 ಕೋ.ರೂ. ಅನುದಾನ ಒದಗಿಸಿದ ಹಿನ್ನೆಲೆ ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಜು.10 ರಂದು ಹಮ್ಮಿಕೊಂಡ ಲಾಯಿಲ ಗ್ರಾಮದ ವಿಕಾಸ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಲಾಯಿಲದ ಅನೇಕ ಕಾರ್ಯಕರ್ತರ ಪರಿಶ್ರಮದಿಂದ ಸಿದ್ಧಾಂತದಡಿ ಜನಸೇವೆ ಮಾಡಿದ್ದರಿಂದ 25 ವರ್ಷ ಅಧಿಕಾರದ ಆಶೀರ್ವಾದ ಪಡೆದಿದೆ. ಈ ನೆಲೆಯಲ್ಲಿ ಲಾಯಿಲ ಗ್ರಾಮ.ಪಂಚಾಯತಿಗೆ ಹಿಂದಿನ ಅನುದಾನಕ್ಕಿಂತ ಅತೀ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿದೇ ತಾಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪವನ್ನು ಮಾಡಿಕೊಂಡು ಗ್ರಾಮ ಗ್ರಾಮಗಳಿಗೆ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ . ಈ ಕಾರಣದಿಂದಲೇ ತಾಲೂಕಿನ ಹೆಸರು ರಾಜ್ಯದಲ್ಲೇ ಮಾದರಿಯಾಗಿ ಮೂಡಿ ಬಂದಿದೆ. ಗ್ರಾಮಗಳ ಅಭಿವೃದ್ಧಿ ಮೂಲಕ ನವ ಬೆಳ್ತಂಗಡಿ ನಿರ್ಮಾಣದ ಸಂಕಲ್ಪವು ಪೂರ್ಣಗೊಳ್ಳುತ್ತಿದೆ.ಎಂದು ಹೇಳಿದರು.

 

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಸರ್ವಧರ್ಮದವರನ್ನು ಸಮಾನ ರೀತಿಯಲ್ಲಿ ಗೌರವಿಸುತ್ತಾ ಬಂದಿದೆ. ಪಕ್ಷದ ಕೆಲಸ ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಹೋಗುವುದು ಮಾತ್ರ ಅಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಈ ರೀತಿಯ ಹೊಸ ಆಯಾಮಗಳನ್ನು ಪಕ್ಷ ಅಳವಡಿಸಿಕೊಂಡಿದೆ. ಕೇವಲ ಅಧಿಕಾರ ಮಾತ್ರವಲ್ಲ ನಮ್ಮ ಗುರಿ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪ್ರತೀ ಮನೆ ಮನೆಗೂ ತಲುಪಿಸುವುದು ಎಂದರು.

 

 

 

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಬದಲಾವಣೆ ಏನೆಲ್ಲ ಆಗಿದೆ ಎಂದು ನೋಡಿದರೆ ಕೇವಲ ರಸ್ತೆ, ಮಾತ್ರ ಅಲ್ಲ ಗ್ರಾಮ ಪಂಚಾಯತಿಗಳಿಗೆ ಬರುವ ಅನುದಾನಗಳು ಹೆಚ್ಚಾಗಿದೆ, ಪದ್ಮಶ್ರೀ, ಪದ್ಮವಿಭೂಷಣ, ಆಯ್ಕೆಯಲ್ಲಿ ಸಮಾಜದ ಉದ್ಧಾರಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸುತ್ತಿದ್ದಾರೆ, ರಾಷ್ಟ್ರಪತಿ ಆಯ್ಕೆ ಈ ಮೊದಲು ಬೇರೆ ರೀತಿಯಲ್ಲಿ ಆಯ್ಕೆ ಮಾಡುತ್ತಿದ್ದರು, ಆದರೆ ಬಿಜೆಪಿ ಸರ್ಕಾರ ಜಾತಿ ಮತ ಪಂಥಗಳ ಹಂಗಿಲ್ಲದೆ ಸಮಾಜದ ಉದ್ಧಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವವರನ್ನು ರಾಷ್ಟ್ರಪತಿ, ರಾಜ್ಯಸಭೆಗೆ ಆಯ್ಕೆಯಲ್ಲಿ ಬದಲಾವಣೆ ಆಗಿದೆ. ಹೀಗೆ ಬಿಜೆಪಿ ಪಕ್ಷವು ದೇಶದಲ್ಲಿ, ರಾಜ್ಯದಲ್ಲಿ, ಅದೇ ರೀತಿ ಗ್ರಾಮದಲ್ಲಿ ಬದಲಾವಣೆ ಮಾಡುತಿದೆ ಎಂದರು.

ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಲಾಯಿಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅಜಿತ್ ಆರಿಗ, ಲಾಯಿಲ ಶಕ್ತಿಕೇಂದ್ರ ಅಧ್ಯಕ್ಷ ಗಣೇಶ್ ಸಪಲ್ಯ ಕನ್ನಾಜೆ ಉಪಸ್ಥಿತರಿದ್ದರು.

ವಿಕಾಸ ಹಬ್ಬದ ಸಂಚಾಲಕ ಗಿರೀಶ್ ಡೋಂಗ್ರೆ ಪ್ರಸ್ತಾವಿಸಿದರು. ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಆರ್. ಸ್ವಾಗತಿಸಿ ಅಧ್ಯಕ್ಷೆ ಆಶಾ ಸಲ್ದಾನ ಧನ್ಯವಾದವಿತ್ತರು. ರುಕ್ಮಯ ಕನ್ನಾಜೆ ಹಾಗೂ ಗ್ರಾ.ಪಂ ಸದಸ್ಯ ಅರವಿಂದ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!