ರಾಜ್ಯ ಸಭೆಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ: ಟ್ವೀಟ್ ಮೂಲಕ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

 

 

ಬೆಳ್ತಂಗಡಿ: ರಾಜ್ಯ ಸಭೆಗೆ ಕರ್ನಾಟಕದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ‌ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ‌ ಟ್ವೀಟ್ ಮೂಲಕ ತಿಳಿಸಿದ್ದಾರೆ.

 

 

 

” ನಾನು ಧರ್ಮಸ್ಥಳಕ್ಕೆ ಭೇಟಿ‌ ನೀಡಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಗೆ ನೀಡುತ್ತಿರುವ ಕೊಡುಗೆಯನ್ನು ಗಮನಿಸಿದ್ದೇನೆ.‌ ಸಮಾಜ‌ ಸೇವೆಯಲ್ಲಿ ಅವರು ಮುಂಚೂಣಿಯಲ್ಲಿದ್ದು, ಸಂಸತ್ತಿನ ಕಲಾಪಕ್ಕೆ ಮೆರುಗು‌ ನೀಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಟ್ವೀಟ್ ಮೂಲಕ‌ ತಿಳಿಸಿದ್ದಾರೆ.
ಈ ಮೂಲಕ ಧರ್ಮಸ್ಥಳಕ್ಕೆ ಭೇಟಿ‌ ನೀಡಿದ್ದ ಸಂದರ್ಭವನ್ನೂ‌ ಸ್ಮರಿಸಿಕೊಂಡಿದ್ದಾರೆ.

 

 

ಹೆಗ್ಗಡೆಯವರ ಜೊತೆ ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ, ವಿಜಯೇಂದ್ರ ಪ್ರಸಾದ್, ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿ.ಟಿ.ಉಷಾ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ‌ ಮಾಡಿರುವ ಕುರಿತು ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

 

 

error: Content is protected !!