ವಿಟ್ಲ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ ಪ್ರಕರಣ ಚಾರ್ಮಾಡಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

 

 

 

 

ಬೆಳ್ತಂಗಡಿ : ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವಿವಾಹಿತ ಮಹಿಳೆಯನ್ನು ಆಟೋ ಚಾಲಕನೊಬ್ಬ ನಡುರಸ್ತೆಯಲ್ಲಿ ಅಡ್ಡಹಾಕಿ ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಚಾರ್ಮಾಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.

 

      ಕೊಲೆಗೀಡಾದ ಮಹಿಳೆ ಶಕುಂತಲಾ

ಮಹಿಳೆಗೆ ಚೂರಿ ಇರಿದ ಬಳಿಕ ಆಟೋದಲ್ಲಿ ಬೆಳ್ತಂಗಡಿಯ ಚಾರ್ಮಾಡಿ ಘಾಟ್ ಮೂಲಕ ಚಿಕ್ಕಮಗಳೂರು ಕಡೆಗೆ ಪರಾರಿಯಾಗುತ್ತಿದ್ದ, ಈ ಬಗ್ಗೆ ವಿಟ್ಲ ಪೊಲೀಸರ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪಿಎಸ್‌ಐ ಕೃಷ್ಣಕಾಂತ್ ಪಾಟೀಲ್ ಸೂಚನೆಯಂತೆ ಹೆಡ್ ಕಾನ್ಸ್ಟೇಬಲ್‌ಗಳಾದ ಪ್ರಶಾಂತ್, ಅಸ್ಲಾಂ, ಟ್ರಾಪಿಕ್ ಕಾನ್ಸ್ಟೇಬಲ್ ಪ್ರವೀಣ್ ಹಾಗೂ ಗೃಹರಕ್ಷಕ ಸಿಬ್ಬಂದಿ ವಿದ್ಯಾಶ್ರೀ ಮತ್ತು ಚಾಲಕ ಲೋಕೇಶ್ ಅವರನ್ನೊಳಗೊಂಡ ತಂಡವು ಘಟನೆ ನಡೆದ ಮೂರು ಗಂಟೆಯೊಳಗೆ ಚಾರ್ಮಾಡಿಯ ಚೆಕ್ ಪೋಸ್ಟ್ ಬಳಿ ಆಟೋ ಚಾಲಕ ಶ್ರೀಧರ್ ಎಂಬಾತನನ್ನು ಆಟೋ ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

 

 

error: Content is protected !!