ಮುಸ್ಲಿಂ ಮತ ಓಲೈಕೆಗಾಗಿ ಅಲ್ಪಸಂಖ್ಯಾತ ಸಮಾವೇಶ 4 ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ ಅನುದಾನಗಳೆಷ್ಟು ? ಸಾಹುಲ್ ಹಮೀದ್ ಪ್ರಶ್ನೆ ಕಾಜೂರಿನ ಕಬರ್ ಸ್ತಾನದಲ್ಲಿ ಇರುವ ಕಲ್ಲುಗಳನ್ನು ಬಿಜೆಪಿಗರು ಶಿವಲಿಂಗ ಎಂದು ಹೇಳಿಯಾರು ಎಚ್ಚರ..! ಪತ್ರಿಕಾಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್‌ ಮುಖಂಡ

 

 

ಬೆಳ್ತಂಗಡಿ: ರಾಜಕೀಯ ಓಲೈಕೆಗಾಗಿ ಅಲ್ಪಸಂಖ್ಯಾತ ಸಮಾವೇಶವನ್ನು ಶಾಸಕ ಹರೀಶ್ ಪೂಂಜ ಮಾಡಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯ ಸಾಹುಲ್ ಹಮೀದ್ ಆರೋಪಿಸಿದರು.ಅವರು ಜೂ 25 ರಂದು ಸುವರ್ಣ ಆರ್ಕೆಡ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಕೆಲವು ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ಯಾರಿಗಳ ಮತ ಬೇಡ ಹಿಂದೂ ಸಮುದಾಯದ ಮತ ಮಾತ್ರ ಸಾಕು ಎಂದು ಹೇಳಿಕೆ ನೀಡಿ ಇದೀಗ ಅಲ್ಪಸಂಖ್ಯಾತ ಸಮಾವೇಶದ ಮೂಲಕ ಮುಸ್ಲಿಂ ಮತ ಓಲೈಕೆಗಾಗಿ ರಾಜಕೀಯದ ನಾಟಕವಾಡುತಿದ್ದಾರೆ. ಉಜಿರೆಯಲ್ಲಿ ಗ್ರಾ.ಪಂ ಮತ ಎಣಿಕೆ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಾನೆ ಎಂಬ ಆರೋಪ ಹೊತ್ತು ಜೈಲಿಗೆ ಹೋಗಿದ್ದ ಯುವಕನ ತಂದೆಗೂ ಸನ್ಮಾನ ಮಾಡಲಾಗಿದೆ. ಇದು ಯಾವ ಮಟ್ಟದ ರಾಜಕೀಯ. ರಾಜಧರ್ಮ ಪಾಲನೆ ಮಾಡಿದ್ದೆನೆ ಎನ್ನುವ ಶಾಸಕರು 4 ವರ್ಷಗಳಲ್ಲಿ ತಾಲೂಕಿನ ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ನೀಡಿದ ಅನುದಾನ ಎಷ್ಟು ಇದರಲ್ಲಿ ಎಷ್ಟು ರಾಜಧರ್ಮ ಪಾಲಿಸಿದ್ದೀರಿ. ಕರಾಯದಲ್ಲಿ ಮೌಲನಾ ಅಜಾದ್ ಕಾಲೇಜು ಸ್ಥಾಪನೆಗೆ 15 ಎಕರೆ ಜಾಗ ಮೀಸಲಿರಿಸಲಾಗಿದೆ.ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.ಅದರೆ ಕರಾಯದಲ್ಲಿ ಅಷ್ಟು ಸರ್ಕಾರಿ ಜಾಗ ಇಲ್ಲ ಒಂದು ವೇಳೆ ಅಷ್ಟು ಜಾಗ ಮೀಸಲಿರಿಸಿದ್ದಲ್ಲಿ ನಾನು ಶಾಸಕರ ಅಭಿಮಾನಿಯಾಗುತ್ತೇನೆ.ಅಲ್ಪಸಂಖ್ಯಾತರಿಗಾಗಿ ಹಿಂದಿನ ಸರಕಾರ ರೂಪಿಸಿದ್ದ ಹಲವಾರು ಯೋಜನೆಗಳಿಗೆ ಅನುದಾನ ಕಡಿತ ಮಾಡಿದ್ದೆ ಬಿಜೆಪಿ ಸರಕಾರದ ಸಾಧನೆಯಾಗಿದೆ.ಅಲ್ಪಸಂಖ್ಯಾತರಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಹೇಳಿಕೆ ಶಾಸಕರು ನೀಡಿದ್ದಾರೆ. ಅದರೆ ಸರಕಾರ ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಕಸಿದುಕೊಳ್ಳುವ ಕಾರ್ಯಕ್ರಮ ಮಾಡುತ್ತಿದೆ. ವಿದ್ಯಾರ್ಥಿವೇತನ ಸಹಿತ ಅನಿಯಂತ್ರಿತವಾಗಿ ಸೌಲಭ್ಯ ಕಡಿತಗೊಳಿಸಿದ್ದಾರೆ. ಶಾಂತಿ ಸೌಹರ್ದತೆಯಿಂದ ಬದುಕುತ್ತಿರುವ ತಾಲೂಕಿನ ಜನರ ನಡುವೆ ತಮ್ಮ ರಾಜಕೀಯ ಹಿತ ಕಾಯ್ದುಕೊಳ್ಳಲು ಶಾಸಕರು ವಿಷಬೀಜ ಬಿತ್ತುವ ಕಾರ್ಯಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಗರ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಕೆ.ಸಲೀಂ ಮಾತನಾಡಿ

ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇದ್ದಾರೆ.ಅದ್ದರಿಂದ ಚುನಾವಣಾ ಒಲೈಕೆಗಾಗಿ ಅಲ್ಪ ಸಂಖ್ಯಾತ ಸಮಾವೇಶವನ್ನು ಮಾಡಿದ್ದಾರೆ. ತಾಲೂಕಿಗೆ 4 ವರ್ಷದಲ್ಲಿ 1800 ಕೋಟಿ ಅನುದಾನವನ್ನು ತರಲಾಗಿದೆ ಎನ್ನುವ ಶಾಸಕರು ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಎಷ್ಟು ಅನುದಾನ ಮೀಸಲಿರಿಸಿದ್ದೀರಿ ಎನ್ನುವ ಅಂಕಿ ಅಂಶ ನೀಡಬೇಕು. ಕಾಜೂರು ದರ್ಗಾಕ್ಕೆ 1.50 ಕೋಟಿ ವಸತಿ ಗೃಹ ನಿರ್ಮಾಣಕ್ಕಾಗಿ ಅನುದಾನ ಮೀಸಲಿರಿಸಲಾಗಿದೆ. ಶೀಘ್ರವೇ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಇದರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಆಗಮಿಸಲಿದ್ದಾರೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ಈ ಮೂಲಕ
ಕಾಜೂರು ದರ್ಗಾ ಹಾಗೂ ಮಸೀದಿ ಕಮಿಟಿಯವರು ಎಚ್ಚರಿಕೆ ವಹಿಸಬೇಕು ಶಿಲಾನ್ಯಾಸ ಸಮಾರಂಭಕ್ಕೆ ಸಚಿವರೊಂದಿಗೆ ಬಿಜೆಪಿಗರು ಹಾಗೂ ಆರ್ ಎಸ್ ಎಸ್ ನವರು  ಕಾಜೂರು ಮಸೀದಿ ವಠಾರಕ್ಕೆ ಆಗಮಿಸುವಾಗ
ಮಸೀದಿ ವಠಾರದಲ್ಲಿ ಅನೇಕ ವರುಷಗಳ ಹಿಂದಿನ ಕಬರ್ ಸ್ತಾನದಲ್ಲಿ ದಫನ‌ ಮಾಡಿದ ಭೂಮಿಯಲ್ಲಿ ತಲೆ ಹಾಗೂ ಕಾಲು ಭಾಗಕ್ಕೆ ವೃತ್ತಕಾರದ ಕಲ್ಲು ಇಡುವ ಸಂಪ್ರದಾಯ ಇದೆ. ಅಲ್ಲಿ ಹತ್ತಿರವೇ ನದಿ ಇರುವುದರಿಂದ ಅದರಿಂದ ವೃತ್ತಕಾರದ ಕಪ್ಪು ಕಲ್ಲು ಇಟ್ಟಿದ್ದಾರೆ ಒಂದು ವೇಳೆ ಅದನ್ನು ನೋಡಿ ಶಿವಲಿಂಗ ಎಂದು ಹೇಳಿಯಾರು ಈ ಬಗ್ಗೆ ಕಮಿಟಿಯವರು ಗಮನ ಹರಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಸ್ವಾತಂತ್ರ್ಯ ನಂತರ ಅಲ್ಪಸಂಖ್ಯಾತರಿಗೆ ಅತ್ಯುತ್ತಮ ಕೊಡುಗೆ ನೀಡಿದೆ ಎನ್ನುತ್ತಾರೆ ಅದರೆ ಎನ್. ಆರ್.ಸಿ,ಸಿ. ಎ.ಎ. ಎನ್.ಪಿ.ಆರ್ ನಂತಹ ಕಾನೂನ ಜಾರಿ ತಂದದ್ದೆ ದೊಡ್ಡ ಸಾಧನೆಯಾಗಿದೆ.ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಬ್ದುಲ್ ರಹಿಮಾನ್ ಪಡ್ಪು, ಅಶ್ರಫ್ ನೆರಿಯ, ವಿನ್ಸೆಂಟ್ ಮಡಂತ್ಯಾರ್, ಸೆಬಾಸ್ಟಿಯನ್ ಕಳೆಂಜ,ಅಬ್ದುಲ್ ಕರೀಂ ಗೇರುಕಟ್ಟೆ ಇದ್ದರು.

error: Content is protected !!