ಸಾರ್ವಜನಿಕ ಗಣೇಶೋತ್ಸವ ಸಮಿತಿ ಲಾಯಿಲ: ನೂತನ‌ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಬೋಜರಾಜ್, ಕಾರ್ಯದರ್ಶಿ ಗಣೇಶ್.ಆರ್. ಕೋಶಾಧಿಕಾರಿ ಅರವಿಂದ ಲಾಯಿಲ ಆಯ್ಕೆ.

 

 

ಬೆಳ್ತಂಗಡಿ:ಸಾರ್ವಜನಿಕ ಗಣೇಶೋತ್ಸವ ಸಮಿತಿ ಲಾಯಿಲ ಇದರ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಲಾಯಿಲದ ವಿಘ್ನೇಶ್ವರ ಕಲಾಮಂದಿರದಲ್ಲಿ ಜರಗಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಭೋಜರಾಜ ಪ್ರಗತಿ ನಗರ, ಕಾರ್ಯದರ್ಶಿಯಾಗಿ ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ  ಗಣೇಶ್ ರಾಘವೇಂದ್ರ ನಗರ, ಕೋಶಾಧಿಕಾರಿಯಾಗಿ ಗ್ರಾಮ ಪಂಚಾಯತ್ ಸದಸ್ಯ ಅರವಿಂದ್ ರಾಘವೇಂದ್ರ ನಗರ ಇವರುಗಳು ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಸೃಜನ್ ಉಪಾಧ್ಯಕ್ಷರುಗಳಾಗಿ ಪುಷ್ಪರಾಜ್ ಪಡ್ಲಾಡಿ ಹಾಗೂ ಸದಾಶಿವ ಕಕ್ಕೇನ, ಜೊತೆ ಕೋಶಾಧಿಕಾರಿಯಾಗಿ ರಮೇಶ್ ಲಾಯಿಲ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶಶಿಕುಮಾರ್ ಅಯೋಧ್ಯನಗರ ಹಾಗೂ ಆಯುಷ್, ಅನ್ನಸಂತರ್ಪಣಾ ವ್ಯವಸ್ಥೆಯಲ್ಲಿ ಸುರೇಶ್ ಬರಮೇಲು, ಗಂಗಾಧರ ಹೆಗ್ಡೆ, ಸೀತಾರಾಮ ಹೆಗ್ಡೆ, ರಾಜ್ ಕುಮಾರ್, ಹರಿಕೃಷ್ಣ ಪುತ್ರಬೈಲ್ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

error: Content is protected !!