ಬೆಳ್ತಂಗಡಿ : ಕೃತಕ ಕಾವಿನಿಂದ 13 ಮೊಟ್ಟೆಯಿಂದ ಹೊರಬಂದ ಹೆಬ್ಬಾವು ಮರಿಗಳು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಜೋಯ್ ತಂಡ

 

 

 

 

ಬೆಳ್ತಂಗಡಿ : ಹಳೆ ಮನೆ ನವೀಕರಣ ವೇಳೆ ಮನೆಯ ಒಳಗಡೆ ಹೆಬ್ಬಾವು 15 ಮೊಟ್ಟೆ ಇಟ್ಟಿದ್ದು ಇದನ್ನು ಸ್ನೇಕ್ ಜೋಯ್ ತಂಡ ಸುರಕ್ಷಿತವಾಗಿ ತಂದು ಕೃತಕ ಕಾವು ನೀಡಿ ನಂತರ ಮೊಟ್ಟೆಯಿಂದ ಹಾವಿನ ಮರಿ ಹೊರಬಂದಿದೆ ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬೀಡಲಾಗಿದೆ.

ಬೆಳ್ತಂಗಡಿ ತಾಲೂಕಿನ ಜ್ಯೂನಿಯರ್ ಕಾಲೇಜ್ ಬಳಿಯ ಹಳೆ ಮನೆ ನವೀಕರಣಗೊಳಿಸುತ್ತಿದ್ದ ವೇಳೆ ಕೆಲಸದವರಿಗೆ ಮನೆಯ ರೂಂ ನಲ್ಲಿ ಹೆಬ್ಬಾವು ಜೊತೆ 15 ಮೊಟ್ಟೆ ಇಟ್ಟಿದ್ದು ಇದನ್ನು ಮನೆ ಮಾಲೀಕರಿಗೆ ತಿಳಿಸಿದ್ದು ನಂತರ ಉಜಿರೆ ಸ್ನೇಕ್ ಜೋಯ್ ಮತ್ತು ಶಿಷ್ಯರಾದ ಸ್ನೇಕ್ ಅಶೋಕ್ ಲಾಯಿಲ , ಸ್ನೇಕ್ ಲಿಂಗರಾಜು ಉಜಿರೆ ತಂಡ ಸುರಕ್ಷಿತವಾಗಿ ಹಿಡಿದು ಸ್ನೇಕ್ ಜೋಯ್ ಮನೆಯಲ್ಲಿ ಒಂದು ತಿಂಗಳು ಅಕ್ವೇರಿಯಂ ಒಳಗಡೆ ಕೃತಕ ಕಾವು ನೀಡಿದ್ದು ಅದರಲ್ಲಿ 13 ಮೊಟ್ಟೆಯಿಂದ ಅರೋಗ್ಯವಾಗಿ ಮರಿ ಹೊರಬಂದಿದೆ.

ಹಾವು ಮೊಟ್ಟೆ ಇಟ್ಟು ಹೊರಬರಲು 50 ರಿಂದ 70 ದಿನ ಬೇಕಾಗುತ್ತದೆ ಅದಲ್ಲದೆ 28 ಡಿಗ್ರಿಯಿಂದ 32 ಡಿಗ್ರಿವರೆಗೆ ತಾಪಮಾನ ಬೇಕಾಗುತ್ತದೆ ಆದ್ರೆ ಈ ಹೆಬ್ಬಾವು ಮೊಟ್ಟೆ ಇಟ್ಟು ಎಷ್ಟು ದಿನವಾಗಿತ್ತು ಎಂದು ಸ್ಪಷ್ಟವಾಗಿ ತಿಳಿದಿಲ್ಲ ಈ ಮೊಟ್ಟೆಯನ್ನು ಕೃತಕ ಕಾವು ನೀಡಿದ ಒಂದು ತಿಂಗಳಲ್ಲಿ ಮೊಟ್ಟೆಯಿಂದ ಮರಿ ಹೊರಬಂದಿದೆ.

ಹೆಬ್ಬಾವು ಮತ್ತು 13 ಮರಿಗಳ ಅರೋಗ್ಯ ನೋಡಿಕೊಂಡು ಸ್ನೇಕ್ ಜೋಯ್ ತಂಡ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬಿಡಲಾಗಿದೆ.

error: Content is protected !!