ಸುಳ್ಯ: ದೊಡ್ಡ ಶಬ್ದದೊಂದಿಗೆ ಭೂಕಂಪನದ ಅನುಭವವಾಗಿ ಜನರು ಹೊರಗೆ ಓಡಿ ಬಂದ್ದ ಘಟನೆ ಸುಳ್ಯ ತಾಲೂಕಿನ ಕೆಲವೆಡೆ ನಡೆದಿದೆ.
ಬೆಳಿಗ್ಗೆ 9 ಗಂಟೆ 10 ಸೆಕೆಂಡಿನಿಂದ, 9.16 ಸೆಕೆಂಡ್ ಸಮಯದಲ್ಲಿ ಲಘು ಕಂಪನದ ಅನುಭವ ಆಗಿದೆ.ಹಲವೆಡೆ ಶಬ್ದದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ಅನುಭವ ಹಂಚಿಕೊಂಡಿದ್ದಾರೆ.ಅದಲ್ಲದೆ ಕೆಲವೆಡೆ ಮನೆ ಗೊಡೆಗಳಿಗೂ ಹಾನಿಯಾದ ಬಗ್ಗೆಯೂ ತಿಳಿದುಬಂದಿದೆ. ಕಲ್ಲುಗುಂಡಿ, ಸಂಪಾಜೆ, ಗೂನಡ್ಕ, ಅಡ್ತಲೆ, ಅರಂತೋಡು, ಅರಂಬೂರು ಮತ್ತಿತರ ಭಾಗಗಳಲ್ಲಿ ಗುಡುಗಿನ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಗೂನಡ್ಕ ಕಚೇರಿಯಲ್ಲಿ ಕುಳಿತಿದ್ದಾಗ ಭಾರೀ ಶಬ್ದದೊಂದಿಗೆ ಸುಮಾರು 3 ಸೆಕೆಂಡುಗಳ ಕಾಲ ಕಂಪನ ಆದ ಅನುಭವ ಆಗಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿಯೂ ಲಘು ನಡುಕ ಉಂಟಾಗಿದೆ. ಬೀರಮಂಗಲ ಭಾಗದಲ್ಲಿ ಗುಡುಗಿನ ಶಬ್ದದೊಂದಿಗೆ ಸುಮಾರು4- 5 ಸೆಕೆಂಡುಗಳ ಕಾಲ ನಡುಗಿದ ಅನುಭವ ಆಗಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ತಾಲೂಕಿನ ವಿವಿಧ ಭಾಗಗಳಲ್ಲಿ ಕಂಪನದ ಅನುಭವ ಆಗಿರುವ ಬಗ್ಗೆ ಸಾರ್ವಜನಿಕರೂ ಮಾಹಿತಿಗಳನ್ನು ನೀಡಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿನೀಡಲಾಗಿದ್ದು. ಹೆಚ್ಚಿನ ಮಾಹಿತಿ ನಂತರವಷ್ಟೆ ತಿಳಿದು ಬರಬೇಕಾಗಿದೆ.