ಅಲ್ಪಸಂಖ್ಯಾತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಶಾಸಕ ಹರೀಶ್ ಪೂಂಜ ಉಜಿರೆ ಅಲ್ಪಸಂಖ್ಯಾತ ಸಮಾವೇಶ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮ

 

ಬೆಳ್ತಂಗಡಿ: ಕರಾಯದಲ್ಲಿ ಮೌಲಾನ ಆಜಾದ್ ವಸತಿ ಶಾಲೆ ಆರಂಭಿಸಲು 15ಎಕರೆ ಜಾಗ ಗುರುತಿಸಲಾಗಿದೆ,ಮುಸ್ಲಿಂ,ಕ್ರಿಶ್ಚಿಯನ್,ಜೈನ ಸಮುದಾಯ ಸಹಿತ ಎಲ್ಲ ಅಲ್ಪ ಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಜತೆ ಅವರ ವೃತ್ತಿ ಬದುಕಿಗೆ ಶಕ್ತಿ ನೀಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಮೋದಿಜಿಯವರ 8 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಉಜಿರೆ ಶಾರದಾ ಮಂಟಪದಲ್ಲಿ ಜೂ.22 ರಂದು ಹಮ್ಮಿಕೊಂಡ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

 

 

ಈವರೆಗಿನ ಸರಕಾರಗಳಿಂದ 10 ಪಟ್ಟು ಹೆಚ್ಚು ಅನುದಾನವನ್ನು ಮೀಸಲಿರಿಸಿದ್ದರೆ ಅದು ಪ್ರಧಾನಿ ಮೋದಿ ಸರಕಾರ. ಇದಕ್ಕೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಮರು ಆಯ್ಕೆ ಸಾಕ್ಷಿಯಾಗಿದೆ. ನೂರಾರು ಯೋಜನೆಗಳನ್ನು ನಾವೆಲ್ಲ ಭಾರತೀಯರು ಎಂಬ ಒಂದೇ ಕಲ್ಪನೆಯಡಿ ಅನುಷ್ಠಾನಕ್ಕೆ ತಂದಿರುವುದು 70 ವರ್ಷಗಳಲ್ಲಿ ಅಗದ್ದು. ಕೇವಲ 8 ವರ್ಷಗಳಲ್ಲಿ ಆಗಿದೆ ಎಂದು ಹೇಳಿದರು

ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಸರ್ವಧರ್ಮೀಯರ ಕ್ಷೇತ್ರವಾಗಿರುವ ಕಾಜೂರು ದರ್ಗಾದಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಸದ್ಭಾವನ ಮಂದಿರ ಹಾಗೂ ವಸತಿ ಗೃಹ ನಿರ್ಮಾಣಕ್ಕೆ 1.50 ಕೋ.ರೂ. ಅನುದಾನ ಒದಗಿಸಲಾಗಿದೆ. ಸಧ್ಯದಲ್ಲೆ ಅಲ್ಪಸಂಖ್ಯಾತ ಸಚಿವರಿಂದಲೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಘೋಷಿಸಿದರು.ಜೈನ ಸಮುದಾಯ ಭವನ ನಿರ್ಮಾಣಕ್ಕೆ 50ಲಕ್ಷ ರೂ.ಅನುದಾನ ಒದಗಿಸುವ ಕುರಿತು ತಿಳಿಸಿದರು.ಚರ್ಚ್ ಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದರು.
ನೆರಿಯದ ಸಿಯೋನ್ ಆಶ್ರಮದ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

 

ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ, ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಬು ಗೌಡ, ಅಲ್ಪಸಂಖ್ಯಾತ ಮೋರ್ಚ ಪ್ರ.ಕಾರ್ಯದರ್ಶಿ ವಾಲ್ಟರ್ ಮೋನಿಸ್ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 250 ಮಂದಿ ಸಾಧಕರನ್ನು ಗೌರವಿಸಲಾಯಿತು.

ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅರುಣ್ ಕ್ರಾಸ್ತಾ ಪ್ರಾಸ್ತಾವಿಸಿದರು. ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕ್ರಮ ಪ್ರಭಾರಿ ಶಶಿಧರ್ ಕಲ್ಮಂಜ ಸ್ವಾಗತಿಸಿದರು. ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾರ್ಯದರ್ಶಿ ಅಭಿಜಿತ್ ಜೈನ್ ವಂದಿಸಿದರು. ಶಶಿಧರ್ ಅಳದಂಗಡಿ ವಂದೇಮಾತರಂ ಹಾಡಿದರು. ಅನೂಪ್ ಜೆ.ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!