ಉಜಿರೆ:ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

 

 

ಬೆಳ್ತಂಗಡಿ : ಉಜಿರೆಯ ನಾಗರಾಜ್ ಕಾಂಪೌಂಡ್ ಬಳಿ ಶಂಕರ್ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೈಸೂರಿನಲ್ಲಿ ಹೊಟೇಲ್ ಹೊಂದಿರುವ ಉದ್ಯಮಿಯಾಗಿರುವ ಉಜಿರೆ ಗ್ರಾಮದ ನಾಗರಾಜ್ ಕಾಂಪೌಂಡ್ ನಿವಾಸಿ ಶಂಕರ್ ಶೆಟ್ಟಿ ಮತ್ತು ಕುಟುಂಬ ಮೈಸೂರಿನಲ್ಲಿ ವಾಸ್ತವ್ಯ ಇರುತಿದ್ದು ,ರಜೆ ಸಂದರ್ಭ ಉಜಿರೆಯ ಮನೆಗೆ ಬಂದು ಹೋಗುತ್ತಿದ್ದರು.

ಜೂ 19 ಭಾನುವಾರ ಶಂಕರ್ ಶೆಟ್ಟಿ ಮನೆಯ ಕಾಂಪೌಂಡ್ ಒಳಗಿನಿಂದ ದುರ್ವಾಸನೆ ಬಂದಿದ್ದು, ಪಕ್ಕದ ಮನೆಯ ನಿವಾಸಿ ಶ್ರೀಧರ್ ಗೌಡ ಎಂಬವರು ಬಂದು ಸುತ್ತಮುತ್ತ ಪರಿಶೀಲನೆ ಮಾಡಿದ್ದಾರೆ ನಂತರ ಬಾವಿಯ ಒಳಗಡೆಯಿಂದ ತುಂಬ ದುರ್ವಾಸನೆ ಬರುತಿದ್ದು ಹೋಗಿ ನೋಡಿದಾಗ ವ್ಯಕ್ತಿಯೊಬ್ಬರ ಶವ ಕಂಡಿದ್ದಾರೆ ತಕ್ಷಣ ಮನೆಯ ಮಾಲೀಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಮುಳುಗು ತಜ್ಞರಾದ ಗಾಂಧಿನಗರದ ಶಿಯಾಬ್, ಸಂಜಯನಗರ ಇಸ್ಮಾಯಿಲ್,ಕುಂಟಿನಿ ರಝಕ್, ಕುಂಟಿನಿ ರಫೀಕ್, ಆಂಬುಲೆನ್ಸ್ ಚಾಲಕ ಜಲಿಲ್ ಬಾಬಾ ಅವರ ಮೂಲಕ ಶವ ಮೇಲಕ್ಕೆತ್ತಿದ್ದಾರೆ , ಶವ ಗಂಡಸಿನದ್ದಾಗಿದ್ದು ಬಲ ಕೈಯಲ್ಲಿ ‘ಮಂಜುಳಾ’ ಎಂಬುವುದಾಗಿ ಟ್ಯಾಟು ಹಾಕಿದ್ದಾರೆ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಶವವನ್ನು ಸಾಗಿಸಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!