ಬೆಳ್ತಂಗಡಿ: ರಸ್ತೆ ಬದಿಯಲ್ಲಿ ದೊಡ್ಡ ಟೇಬಲ್ ಹಾಕಿ ಸುಮಾರು 50 ಕ್ಕಿಂತಲೂ ಅಧಿಕ ಸ್ಟೀಲ್ ಡಬ್ಬಗಳನ್ನು ಇಟ್ಟು ಅದರಲ್ಲಿ ವಿವಿಧ ಬಗೆಯ ಮರ ಗಿಡಗಳ ಬೇರುಗಳನ್ನು ಇಟ್ಟು ಹಿಮಾಲಯದ ತಪ್ಪಲಿನಿಂದ ತರಿಸಿದಂತಹ ಮರ ಗಿಡಗಳ ಬೇರು ಇದರ ಹುಡಿ ಎಲ್ಲ ರೋಗಗಳನ್ನು ತಕ್ಷಣ ಗುಣ ಪಡಿಸುವ ಶಕ್ತಿ ಹೊಂದಿದೆ ಎಂದು ಜನರನ್ನು ನಂಬಿಸಿ ಮೆಡಿಕಲ್ ಸ್ಟೋರ್ ಗಳ ಮೂಲಕ ಬೆಳ್ತಂಗಡಿಯಲ್ಲಿ ಜನರಿಗೆ ಉಂಡೆ ನಾಮ ಹಾಕುತಿದ್ದ ದೊಡ್ಡ ಜಾಲದ ಮಾಹಿತಿಯನ್ನು ಪ್ರಜಾಪ್ರಕಾಶ ನ್ಯೂಸ್ ಭೇದಿಸಿದೆ.
ವ್ಯವಹಾರ ನಡೆಯುವ ರೀತಿ ಹೇಗೆ..!
ಬೆಳ್ತಂಗಡಿ ತಾಲೂಕಿನ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನ ಸೌಧದ ಬಳಿ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ
ರಸ್ತೆ ಬದಿಗಳಲ್ಲಿ ವಿವಿಧ ಬಗೆಯ ಗಿಡ ಮರಗಳ ಬೇರುಗಳನ್ನು ಇಟ್ಟು ಎಲ್ಲಾ ರೀತಿಯ ರೋಗಗಳನ್ನು ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲದ ಆಯುರ್ವೆದಿಕ್ ಈ ಮದ್ದು ಗುಣ ಪಡಿಸುತ್ತದೆ ಎಂಬುವುದಾಗಿ ಜನರನ್ನು ನಂಬಿಸಿ ಸ್ವಲ್ಪ ಮದ್ದನ್ನು ಸ್ಥಳದಲ್ಲೇ ನೀಡಿ 500 ರೂ ಪಡೆಯುತ್ತಾರೆ.ನಂತರ ರೋಗ ಸಂಪೂರ್ಣ ಗುಣವಾಗಬೇಕಾದರೆ ಎರಡು ತಿಂಗಳ ಕೋರ್ಸ್ ಮಾಡಬೇಕು ಎಂದು ಹೇಳಿ ಉಳಿದ ಮದ್ದು ಅನ್ ಲೈನ್ ಮೂಲಕ ತರಿಸಬೇಕು ಅದಲ್ಲದೇ ಅದು ತುಂಬಾ ದುಬಾರಿ ಎಂದು ನಂಬಿಸಿ ಮೊದಲೇ ಇವರು ಔಷಧಿಯ ಹುಡಿ ನೀಡಿ ನಿಗದಿ ಪಡಿಸಿಕೊಂಡಿರುವ ಮೆಡಿಕಲ್ ಸ್ಟೋರ್ ಗೆ ಕರೆದುಕೊಂಡು ಬರುತ್ತಾರೆ. ಅಲ್ಲಿ ಅವರಿಗೆ ಗ್ರಾಂ ಲೆಕ್ಕದಲ್ಲಿ ಮದ್ದನ್ನು ನೀಡಲಾಗುತ್ತದೆ.ಒಂದು ಗ್ರಾಂ ಮದ್ದಿನ ಬೆಲೆ ಬರೊಬ್ಬರಿ 4 ಸಾವಿರದಂತೆ ಮೆಡಿಕಲ್ ನವರು ಬಿಲ್ ಮಾಡುತ್ತಾರೆ . ಈ ಬಗ್ಗೆ ಪ್ರಜಾಪ್ರಕಾಶ ತಂಡ ಕಾರ್ಯಾಚರಣೆಗಿಳಿದಾಗ ಬೆಳ್ತಂಗಡಿಯ ನಿವಾಸಿಯೊಬ್ಬರು ಕಳೆದ ಎಪ್ರಿಲ್ 20 ತಾರೀಕಿಗೆ ತಮಗಿದ್ದ ಚರ್ಮ ರೋಗದ ಬಗ್ಗೆ ಇವರಲ್ಲಿ ಮಾಹಿತಿ ಕೇಳಿದ್ದಾರೆ. ಕೇವಲ ಎರಡು ತಿಂಗಳ ಮದ್ದು ಮಾಡಿದ್ದಲ್ಲಿ ಚರ್ಮ ರೋಗ ಸಂಪೂರ್ಣ ಗುಣ ಪಡಿಸಿ ಕೊಡಲಾಗುವುದು ಎಂದು ನಂಬಿಸಿ ಬೆಳ್ತಂಗಡಿಯ ಮೆಡಿಕಲ್ ಗೆ ಇವರನ್ನು ಕರೆದು ಕೊಂಡು ಹೋಗಿ 20 ಗ್ರಾಂ 80 ಸಾವಿರ ನೀಡಿ ಪಡೆದುಕೊಂಡು ಅದು ಮುಗಿದ ನಂತರ ಮತ್ತೆ 20 ಗ್ರಾಂ ಪಡೆದುಕೊಂಡು ಒಟ್ಟು 1,60,000 ರೂ ಔಷಧಿ ಪಡೆದುಕೊಂಡಿದ್ದಾರೆ. ಎಂಬ ಮಾಹಿತಿ ನೀಡಿದ್ದಾರೆ. ಅನೇಕರು ಇದೇ ರೀತಿ ಮೋಸ ಹೋಗಿರುವ ಬಗ್ಗೆಯೂ ತಿಳಿಸಿ ನಾಲ್ಕು ಮಂದಿಯ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಎಲ್ಲಿಂದಲೋ ಬಂದ್ದು ರಸ್ತೆ ಬದಿಯಲ್ಲಿ ಔಷಧಿ ಮಾರುವವರ ಪುಡಿಯನ್ನು ತಮ್ಮ ಮೆಡಿಕಲ್ ನಲ್ಲಿ ಇಟ್ಟು ಲಕ್ಷಾಂತರ ಹಣ ಮಾಡುತ್ತಿರುವುದಲ್ಲದೇ ದುಡ್ಡಿನ ದುರಾಸೆಯಿಂದ ನಕಲಿ ಔಷಧಿಗಳನ್ನು ಈ ರೀತಿ ಮಾರಾಟ ಮಾಡಿ ಜನರ ಜೀವದೊಂದಿಗೆ ಆಟ ಆಡುವುದು ಎಷ್ಟು ಸರಿ ಎಂಬುವುದು ನಮ್ಮ ಪ್ರಶ್ನೆಯಾಗಿದೆ. ಅದೇ ರೀತಿ ಈ ಕಾಲದಲ್ಲಿಯೂ ಎಲ್ಲಿಂದಲೋ ಬಂದವರನ್ನು ನಂಬಿ ಔಷಧಿ ಪಡೆದುಕೊಂಡು ಅದರ ಅಡ್ಡ ಪರಿಣಾಮ ಅರಿಯದೇ ಸೇವಿಸುತ್ತಿರುವುದು ಬುದ್ಧಿವಂತರ ಜಿಲ್ಲೆಯಾದ ದ.ಕ ದಲ್ಲಿ ಇದ್ದಾರೆ ಅನ್ನುವುದೇ ಆಶ್ಚರ್ಯ ಸಂಗತಿಯಾಗಿದೆ.ಅದ್ದರಿಂದ ಸಾರ್ವಜನಿಕರು ಸರಿಯಾದ ರೀತಿಯಲ್ಲಿ ವೈದ್ಯರ ಸಲಹೆಯಂತೆ ಔಷಧಿಗಳನ್ನು ಪಡೆದುಕೊಳ್ಳಬೇಕು ಇಂತಹ ನಕಲಿ ಮದ್ದುಗಳನ್ನು ಪಡೆದು ಇಲ್ಲದ ರೋಗಗಳಿಗೆ ಒಳಗಾಗಬಾರದು ಎಂಬುವುದೇ ಪ್ರಜಾಪ್ರಕಾಶ ನ್ಯೂಸ್ ಆಶಯವಾಗಿದೆ.