ಗುರುವಾಯನಕೆರೆ : ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ಮರ ತೆರವು ಕಾರ್ಯಾಚರಣೆ

 

 

ಬೆಳ್ತಂಗಡಿ : ಗಾಳಿಮಳೆಗೆ ಮಧ್ಯರಾತ್ರಿ ಮರವೊಂದು ಬುಡಸಮೇತ ರಸ್ತೆಗೆ ಉರುಳಿ ಬಿದಿದ್ದು ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ

ಮಂಗಳೂರು – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ಎಂಬಲ್ಲಿ ಬೃಹತ್ ಆಲದಮರ ಬುಧವಾರ ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ ಈ ವೇಳೆ ವಾಹನ ಓಡಾಟ ಕಡಿಮೆಯಾಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

 

 

ಮರ ಬಿದ್ದು ವಾಹನ ಸಂಚಾರಕ್ಕೆ ತೊಡಕ್ಕಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆ ರಾತ್ರಿಯೇ ಮರ ತೆರವು ಗೊಳಿಸಿ ಬೆಳಗ್ಗೆ 3 ಗಂಟೆ ಹೊತ್ತಿಗೆ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ

ಬೃಹತ್ ಆಲದ ಮರ ತೆರವು ಕಾರ್ಯಾಚರಣೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿಗಳು , ಸ್ಥಳೀಯರು, ಮೆಸ್ಕಾಂ ಲೈನ್ ಮ್ಯಾನ್  ಕಿಟ್ಟಣ್ಣ ಶೆಟ್ಟಿ, ಹಾಗೂ ಬೆಳ್ತಂಗಡಿ ಪೊಲೀಸರು ಸಹಕರಿಸಿದರು.ಮಧ್ಯರಾತ್ರಿ ಬಿದ್ದ ಮರವನ್ನು ತಕ್ಷಣ ತೆರವುಗೊಳಿಸಲು ಸ್ಪಂದಿಸಿದ ಇಲಾಖೆಗಳ ಹಾಗೂ ಸ್ಥಳೀಯರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!