ಬೈಕ್ ಕಳ್ಳತನಕ್ಕೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನ : ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು ಬೆಳ್ತಂಗಡಿಯ ಸಂತೆಕಟ್ಟೆ ಬಳಿ ನಡೆದ ಘಟನೆ

 

ಬೆಳ್ತಂಗಡಿ : ಬೈಕ್ ಕಳ್ಳತನ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಸಾರ್ವಜನಿಕರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಂತೆಕಟ್ಟೆಯಲ್ಲಿ ನಡೆದಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆ ಎಂಬಲ್ಲಿ ಲಾಯಿಲ‌ ನಿವಾಸಿಯೊಬ್ಬರು  ತಮ್ಮ ಬೈಕ್ ನಿಲ್ಲಿಸಿ ಸೆಲೂನ್ ಗೆ ತೆರಳಿದ ಸಂದರ್ಭ ಕಳ್ಳನೊಬ್ಬ ಬೈಕ್ ನಲ್ಲಿದ್ದ ಹೆಲ್ಮೆಟ್ ಹಾಕಿಕೊಂಡು  ಸ್ಟಾರ್ಟ್ ಮಾಡಲು ಪ್ರಯತ್ನಿಸಿದಾಗ ಗಾಡಿ ಸ್ಟಾರ್ಟ್ ಆಗದಿರುವಾಗ  ಅನುಮಾನಸ್ಪದ ರೀತಿಯಲ್ಲಿ ವರ್ತಿಸುತಿರುವುದನ್ನು   ಗಮನಿಸಿದ  ಪಕ್ಕದ ಅಂಗಡಿಯಲ್ಲಿದ್ದ ಲಾಯಿಲ ನಿವಾಸಿ ಗೌತಮ್ ಎಂಬವರು  ಓಡಿಹೋಗಿ ಬೈಕ್ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ, ತಕ್ಷಣ ಬೈಕ್ ಮಾಲೀಕ ಬೈಕ್ ಬಳಿ ಬಂದು ಕಳ್ಳನನ್ನು ಹಿಡಿದುಕೊಂಡು ವಿಚಾರಿಸಿದ್ದಾಗ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ತಕ್ಷಣ ಅವನನ್ನು ಬೆನ್ನಟ್ಟಿ ಸಂತೆಕಟ್ಟೆ ಬಸ್ ನಿಲ್ದಾಣದ ಬಳಿ ಹಿಡಿದು ವಿಚಾರಿಸಿದಾಗ ತನ್ನ ಹೆಸರು ವಿಳಾಸಗಳನ್ನು ಸುಳ್ಳು ಮಾಹಿತಿ ನೀಡಿದ್ದಾನೆ ಅದಲ್ಲದೆ ಯುವಕ ಆಮಲು ಪದಾರ್ಥ ಸೇವಿಸಿದ್ದ ಎನ್ನಲಾಗಿದೆ ನಂತರ ಬೆಳ್ತಂಗಡಿ ‌ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ಕುಡಿತದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆಯೇ ಅಥವಾ ನಿಜವಾಗಲೂ ಬೈಕ್ ಕಳ್ಳತನ ಮಾಡಲು ಯತ್ನಿಸಿದ್ದಾನೆಯೇ ಎಂದು ಪೊಲೀಸ್  ವಿಚಾರಣೆಯ ನಂತರ ತಿಳಿದು ಬರಬೇಕಾಗಿದೆ.

error: Content is protected !!