ಬೆಳ್ತಂಗಡಿಯಲ್ಲಿ ನಿಲ್ಲದ ಕಳ್ಳತನ ಹಾವಳಿ ಹೋಟೆಲ್ ಸೇರಿದಂತೆ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು

 

 

ಬೆಳ್ತಂಗಡಿ :ಬೆಳ್ತಂಗಡಿ ತಾಲೂಕಿನಲ್ಲಿ ಕಳ್ಳರ ಹಾವಳಿ ದಿನದಿಂದ ದಿನ ಹೆಚ್ಚಾಗತೊಡಗಿದೆ. ನಗರದ
ಮೂರುಮಾರ್ಗದ ಬಳಿ ಇರುವ ಹೋಟೆಲ್ ಹಾಗೂ ಮೊಬೈಲ್ ಅಂಗಡಿಗೆ ಕಳ್ಳರು ನುಗ್ಗಿ ಹಣ ಹಾಗೂ ಮೊಬೈಲ್ ಕಳ್ಳತನಗೈದಿದ್ದಾರೆ.

ಬೆಳ್ತಂಗಡಿಯ ಮೂರು ಮಾರ್ಗದ ಬಳಿ ಇರುವ ಹೋಟೆಲೊಂದಕ್ಕೆ ಕಳ್ಳರು ಹಂಚು ತೆಗೆದು ಒಳ ನುಗ್ಗಿ ಕೌಂಟರ್ ನಲ್ಲಿದ್ದ ಹಣವನ್ನು ಹಾಗೂ ಸಿಸಿ ಕ್ಯಾಮಾರದ ಡಿವಿಆರ್ ಬಾಕ್ಸ್ ತೆಗೆದುಕೊಂಡು ಹೋಗಿದ್ದಾರೆ ಅದೇ ರೀತಿ ಅಲ್ಲೇ ಪಕ್ಕದಲ್ಲಿ ಇರುವ ಮೊಬೈಲ್ ಅಂಗಡಿಗೂ ಕಳ್ಳರು ಹಂಚು ತೆಗೆದು ಒಳ ನುಗ್ಗಿದ್ದಾರೆ ಅಂಗಡಿಯಲ್ಲಿದ್ದ ಎರಡು ಮೊಬೈಲ್ ಕಳ್ಳತನಗೈದಿದ್ದಾರೆ .ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!