ಬೆಳ್ತಂಗಡಿ : ಪಶ್ಚಿಮ ಘಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುವ ವಿಷರಹಿತ ‘ಸಾರಿಬಾಳ’ ಹಾವು (Foresten cat Snake ) ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ದಾಮೋದರ್ ಎಂಬವರ ಮನೆಯಲ್ಲಿ ಬೆಳ್ತಂಗಡಿಯ ಸ್ನೇಕ್ ಅಶೋಕ್ ಲಾಯಿಲ ಅವರು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಸಾರಿಬಾಳ ಅಳಿವಿನಂಚಿನಲ್ಲಿರುವ ವಿಷರಹಿತ ಹಾವು ,ಇದರ ಸಂತತಿ ಕೂಡ ಕಡಿಮೆಯಾಗಿದೆ. ಸ್ನೇಕ್ ಅಶೋಕ್ ಅವರ 6 ವರ್ಷದ ಹಿಂದೆ ಲಾಯಿಲ ಗ್ರಾಮದ ಕಿಂಡಾಜೆ ಎಂಬಲ್ಲಿ ಸಾರಿಬಾಳ ಹಾವನ್ನು ಮೊದಲ ಬಾರಿ ಹಿಡಿದ್ದಿದ್ದರು ಇದಾದ ಬಳಿಕ ಶುಕ್ರವಾರ ಧರ್ಮಸ್ಥಳದಲ್ಲಿ ಎರಡನೇ ಭಾರಿ ಸುಮಾರು 7 ಅಡಿ ಉದ್ದದ ಹಾವು ಪತ್ತೆಯಾಗಿದೆ.