ಬೆಸ್ಟ್ ಪೌಂಡೇಷನ್ ಬೆಳ್ತಂಗಡಿ: ನಾವರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

 

 

ಬೆಳ್ತಂಗಡಿ:ಬೆಸ್ಟ್ ಫೌಂಡೇಷನ್ ಬೆಳ್ತಂಗಡಿಯ ನಾವರ ಗ್ರಾಮ ಸಮಿತಿಯ ಸಭೆಯು ನಾವರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆಯಿತು.ಈ ಸಭೆಯಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಭಾಗವಹಿಸಿದರು.ಬೆಸ್ಟ್ ನಾವರ ಸಮಿತಿಯ ಅಧ್ಯಕ್ಷರಾಗಿ ರಂಜಿತ್ ಕಾರ್ಯದರ್ಶಿಯಾಗಿ ಸಂದೀಪ್ ಕೊಶಾಧಿಕಾರಿಯಾಗಿ ಶ್ರೀಮತಿ ಶಶಿಕಲಾ ಉಪಾಧ್ಯಕ್ಷರಾಗಿ ಪ್ರಸಾದ್ ,ಸುಕೇಶ್,ಗಿರಿಯಪ್ಪ ನಾಯ್ಕ ಅಯ್ಕೆಯಾದರು.ಈ ಸಭೆಯಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ನಾವರ ಗ್ರಾಮದ ಹೆಚ್ಚಿನ ಸದಸ್ಯರು ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಸಲಹೆಗಾರರಾದ ಸುಧಾಕರ್ ಲ್ಯಾಲ,ನಿತ್ಯಾನಂದ ನಾವರ, ಮಹಾಲಿಂಗೇಶ್ವರ ದೇವಸ್ಥಾನ ನಾವರದ ಮಾಜಿ ಆಡಳಿತ ಮೊಕ್ತೇಸರಾದ ಜಯಾನಂದ ಪೂಜಾರಿ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಕುಮಾರ್ ಜೈನ್ ,ಉದ್ಯಮಿ ಪ್ರಜ್ವಲ್ ಜೈನ್ ,ಮಹಮ್ಮದ್ ಅಲಿ,ನೌಪೀಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

error: Content is protected !!