ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತಗಳ ಅಗತ್ಯ ಇಲ್ಲ ವಿವಾದಾತ್ಮಕ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

 

 

ಬೆಳ್ತಂಗಡಿ: ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಗಡೆ ಭಗವಧ್ವಜ  ಮುಂದಿನ ದಿನಗಳಲ್ಲಿ ಹಾರಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಈಗ ಮತ್ತೊಮ್ಮೆ ಸುದ್ಧಿಯಾಗಿದ್ಧಾರೆ. ನನಗೆ ಮುಸ್ಲಿಂ ಮತಗಳು ಬೇಡ, ಹಿಂದೂಗಳ ಮತಗಳು ಮಾತ್ರ ಸಾಕು ಎಂದು ವಿವಾದಾತ್ಮಕ ಹೇಳಿಕೆ ನೀಡುವ  ಮೂಲಕ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ.

ಅವರು ಬೆಳ್ತಂಗಡಿ ತಾಲೂಕಿನ ಸಾವ್ಯ ಗುಜ್ಜೊಟ್ಟು ಶುಭೋದಯ ಯುವಕ ಮಂಡಲ  ಇದರ ಆಶ್ರಯದಲ್ಲಿ ನಡೆದ 11 ನೇ ವರ್ಷದ ಶನಿಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ ಮಾಡುತ್ತೇನೆ. ಆದರೆ ಆಗ ತಾಕತ್ತಿನಿಂದ ಹಾಗೂ ಧೈರ್ಯದಿಂದ ಹೇಳುತಿದ್ದೇನೆ, ನನಗೆ ಮುಸ್ಲಿಮರ ಮತಗಳು ಬೇಡ. ನನಗೆ ಕೇವಲ ಹಿಂದೂಗಳ ಮತಗಳು ಮಾತ್ರ ಸಾಕು. ಯಾಕೆಂದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು. ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು. ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣ ಆಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳುತಿದ್ದೇನೆ ಮುಸ್ಲಿಮರ ಮತಗಳು ಬೇಡ ಎಂದು ಗುಡುಗಿದ್ದಾರೆ.

error: Content is protected !!