ಮರೋಡಿ: 8ನೇ ವರ್ಷದ ಶ್ರೀ ಶನೈಶ್ವರ ಪೂಜೆ

 

 

ಬೆಳ್ತಂಗಡಿ: ಮರೋಡಿ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್ ಇದರ ವತಿಯಿಂದ 8ನೇ ವರ್ಷದ ಸಾರ್ವಜನಿಕ ಶನೈಶ್ವರ ಪೂಜೆಯು ಮರೋಡಿ ಉಮಾಮಹೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆಯಿತು.

 

 

ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್‌ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿತು. ಸಂಜೆ ಕಲಶ ಪ್ರತಿಷ್ಠೆ, ಉಮಾಮಹೇಶ್ವರ ದೇವರಿಗೆ ರಂಗ ಪೂಜೆ ನಡೆಯಿತು. ಉಮಾಮಹೇಶ್ವರ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಶನಿಪೂಜೆಯ ವೃತದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸಾರ್ವಜನಿಕ ಅನ್ನಸಂತರ್ಪಣೆ, ಪ್ರಸಾದ ವಿತರಣೆ ನಡೆಯಿತು.

 

 

ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌, ಸದಸ್ಯರಾದ ವಿಜಯ ಆರಿಗ, ರತ್ನಾಕರ ಬುಣ್ಣಾನ್‌, ಸುರೇಂದ್ರ ಸಾಲ್ಯಾನ್‌, ನಾರಾವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ ಹೆಗ್ಡೆ, ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಗೌರವಾಧ್ಯಕ್ಷ ಯಶೋಧರ ಬಂಗೇರ, ಅಧ್ಯಕ್ಷ ರಾಘವ ಬಂಗೇರ, ಕಾರ್ಯದರ್ಶಿ ಯಶೋಧರ ಕೋಟ್ಯಾನ್‌, ಕೋಶಾಧಿಕಾರಿ ರವಿವರ್ಮ, ಮಾಜಿ ಅಧ್ಯಕ್ಷರಾದ ಶುಭರಾಜ ಹೆಗ್ಡೆ, ಹರೀಶ್‌ ಪೂಜಾರಿ, ವಿದ್ಯಾನಂದ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್‌ ಪೂಜಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಕೂಕ್ರಬೆಟ್ಟು ಶಾಲಾ ಮುಖ್ಯಶಿಕ್ಷಕಿ ಸುಫಲಾ ಮತ್ತಿತರರು ಇದ್ದರು.

error: Content is protected !!