ಲಾಯಿಲ ದಾದಿಯರ ದಿನಾಚರಣೆ ಸನ್ಮಾನದ ಮೂಲಕ ಗೌರವಿಸಿದ ಸ್ಥಳೀಯರು

 

 

ಬೆಳ್ತಂಗಡಿ: ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ಲಾಯ್ಲ ಗ್ರಾಮದ ಒಂದನೇ ವಾರ್ಡಿನ ಗ್ರಾಮಸ್ಥರು ಗ್ರಾಮದ ಆರೋಗ್ಯ ಸಹಾಯಕಿಯರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಸದಾ ಗ್ರಾಮದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮನೆ ಮಗಳಂತೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲರ ಪಾಲಿನ ಅಕ್ಕ ಎಂದು ಗುರುತಿಸಿಕೊಳ್ಳುತ್ತಿರುವ ದಾದಿಯರುಗಳ ಸೇವೆ ಶ್ಲಾಘನೀಯ . ಅವರು ನೀಡುತ್ತಿರುವ ನಿಸ್ವಾರ್ಥ ಸೇವೆಯಿಂದ ಅದೆಷ್ಟೋ ಜನರು ಆರೋಗ್ಯವಂತವಾಗಿರಲು ಕಾರಣವಾಗಿದೆ. ಅದ್ದರಿಂದ ದಾದಿಯರ ದಿನಾಚರಣೆಯ ಅಂಗವಾಗಿ ವಾರ್ಡಿನ ಜನತೆಯ ಮೂಲಕ ಗೌರವಿಸಿ ಅವರು ನೀಡುತ್ತಿರುವ ಸೇವೆಗೆ ಕೃತಜ್ಙತೆ ಸಲ್ಲಿಸಲಾಗುತ್ತದೆ. ಇದೇ ರೀತಿ ಎಲ್ಲ ಕಡೆಗಳಲ್ಲೂ ದಾದಿಯರನ್ನು ಗೌರವಿಸಿ ಅವರಿಗೆ ಇನ್ನಷ್ಟು ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿಯರುಗಳಾದ ಶ್ರೀಮತಿ ಗುಣವತಿ, ಶ್ರೀಮತಿ ಸರಸ್ವತಿ, ಸಿ ಎಚ್ ಒ ಶುಭಾಶ್ರೀ ಇವರನ್ನು ಸನ್ಮಾನಿಸಲಾಯಿತು ನಂತರ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!