ಮುಂಡಾಜೆ ಬಳಿ ಬೈಕ್ ಮಗುಚಿ ಬಿದ್ದು ಓರ್ವ ಸಾವು ಮತ್ತೋರ್ವ ಗಂಭೀರ ಗಾಯ

 

 

 

 

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಬೈಕ್ಕೊಂದು ಮಗುಚಿಬಿದ್ದ ಪರಿಣಾಮ ಸವಾರನೊಬ್ಬ ಮೃತ ಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮುಂಡಾಜೆ ಸಮೀಪ ನಡೆದಿದೆ. ಕಳೆದ ರಾತ್ರಿ ಸೋಮಂತಡ್ಕದಿಂದ ದಿಡುಪೆ ಕಡೆಗೆ ಯಶೋಧರ ಎಂಬವರು ಅಶೋಕ್ ಎಂಬವರನ್ನು ಕುಳ್ಳಿರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಸಂಚರಿಸುತಿದ್ದ ವೇಳೆ ಮುಂಡಾಜೆ ಗ್ರಾಮದ ಶಾರದ ನಗರದ ದೇವಿಗುಡಿ ಬಳಿ ನಿಯಂತ್ರಣ ತಪ್ಪಿ ಬೈಕ್ ಮಗುಚಿಬಿದ್ದು ಬೈಕಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಯಶೋಧರ ( 30) ಎಂಬವರು ದಾರಿ ಮದ್ಯೆ ಮೃತ ಪಟ್ಟಿದ್ದಾರೆ ಇನ್ನೋರ್ವ ಗಾಯಾಳು ಅಶೋಕ್ ಅವರಿಗೆ ಸೊಂಟ ಭಾಗಕ್ಕೆ ಗಾಯಗಳಾಗಿದ್ದು ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!