ಗುರುವಾಯನಕೆರೆ ಬಳಿ ಕಾರು ಬೈಕ್ ಡಿಕ್ಕಿ ಇಬ್ಬರಿಗೆ ಗಾಯ

 

 

 

 

ಬೆಳ್ತಂಗಡಿ : ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ  ಗಾಯಗೊಂಡ   ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಕುಲಾಲ ಮಂದಿರ ಬಳಿ ನಡೆದಿದೆ.

 

ಗಾಯಗೊಂಡವರನ್ನು ರವಿಶಂಕರ್ (30) ಹಾಗೂ ಅವರ ಪತ್ನಿ ಎಂದು ಗುರುತಿಸಲಾಗಿದೆ.
ಎಸ್ ಡಿಎಂ ಕಾಲೇಜಿನ ಪ್ರಾಧ್ಯಾಪಕರಾಗಿರುವ ರವಿಶಂಕರ್ ಅವರು ತಮ್ಮ ಪತ್ನಿಯೊಂದಿಗೆ ಉಜಿರೆಯಿಂದ ಪುತ್ತೂರು ಕಡೆಗೆ ಪ್ರಯಾಣಿಸುತಿದ್ದರು . ಕುಲಾಲ ಮಂದಿರ ಬಳಿ ಪುತ್ತೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಶಂಕರ್ ಅವರ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಪತ್ನಿಗೂ ಗಾಯವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

error: Content is protected !!