ಮಾಜಿ ತಾ.ಪಂ ಸದಸ್ಯ ಸುಧಾಕರ್ ಬಿ.ಎಲ್. ಬೆಸ್ಟ್ ಪೌಂಡೇಷನ್ ಗೆ . ಸೇರ್ಪಡೆ: ಶೀಘ್ರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಖಚಿತ ..?

 

 

 

 

ಬೆಳ್ತಂಗಡಿ:  ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಲಾಯಿಲ ಕ್ಷೇತ್ರದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಶಕ್ತಿ ಕೇಂದ್ರ ಪ್ರಭಾರಿ ಸುಧಾಕರ ಬಿ.ಎಲ್ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅವರನ್ನು ಭೇಟಿ ಮಾಡಿದರು. ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಇನ್ನೂ ಮುಂದಕ್ಕೆ ಫೌಂಡೇಷನ್ ನ ಸಾಮಾಜಿಕ ಕೆಲಸ ಕಾರ್ಯಗಳೊಂದಿಗೆ ಸಕ್ರಿಯವಾಗಿ ತಾನು ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

 

 

 


ಬೆಸ್ಟ್ ಪೌಂಡೇಷನ್ ನ ರಕ್ಷಿತ್ ಶಿವಾರಂ (ಕಾಂಗ್ರೆಸ್ ಪಕ್ಷದ) ಕೆಪಿಸಿಸಿ ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೂಡ ಅಗಿದ್ದು

ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆಯೂ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.

ಸುಧಾಕರ್.ಬಿ.ಎಲ್ ಬೆಸ್ಟ್ ಪೌಂಡೇಷನ್ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಅಗುವುದು ಮಾತ್ರ ಖಚಿತ ಎಂದು ಸ್ಥಳೀಯರು ಮಾತನಾಡಿಕೊಳ್ಳುತಿದ್ದಾರೆ. ಅದಲ್ಲದೇ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ  ಕೂಡಾ ಬಿಜೆಪಿ ಹಾಗೂ ಶಾಸಕರ ಬಗ್ಗೆ   ಅಸಮಾಧಾನ ಹೊರ ಹಾಕಿದ್ದು      ಮುಂದಿನ ಕೆಲವೇ ದಿನಗಳಲ್ಲಿ ಅವರು ಕೂಡಾ  ಬೆಸ್ಟ್ ಪೌಂಡೇಷನ್ ಸೇರಿ  ಕಾಂಗ್ರೆಸ್ ಸೇರ್ಪಡೆಗೊಳ್ಳಬಹುದು ಎಂಬ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಿದೆ. ಏನಿದ್ದರೂ ಇನ್ನು ಕೆಲವೇ ದಿನಗಳಲ್ಲಿ ಇವರ ನಡೆಯ ಸ್ಪಷ್ಟ ಚಿತ್ರಣ ಸಿಗಲಿದೆ.

error: Content is protected !!