ಬೈರ ಸಮಾಜದ ಮಾರಿಗುಡಿಗೆ ಶಾಸಕರಿಂದ ಅನುದಾನ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಬೆಸ್ಟ್ ಪೌಂಡೇಶನ್ ಸೇರಿದ ಸುಧಾಕರ್ ಬಿ.ಎಲ್.

 

 

ಬೆಳ್ತಂಗಡಿ:   ಲಾಯಿಲ  ಶಕ್ತಿ ಕೇಂದ್ರದ ಅಧ್ಯಕ್ಷನಾಗಿದ್ದು ಹಲವು ಸ್ಥಾನಗಳನ್ನು ಅಲಂಕರಿಸಲು ವೇದಿಕೆ ಕಲ್ಪಿಸಿಕೊಟ್ಟ ಬಿಜೆಪಿ ಪಕ್ಷಕ್ಕೆ ಇತ್ತೀಚೆಗೆ ಶಾಸಕರು ತಮ್ಮ ಮಾತನ್ನು ಕೇಳುವುದಿಲ್ಲ ಎಂಬ ನೆಪವೊಡ್ಡಿ  ರಾಜೀನಾಮೆ ನೀಡಿ ಬೆಸ್ಟ್ ಪೌಂಡೇಶನ್ ಸೇರಿದ ಸುಧಾಕರ್ ಬಿ.ಎಲ್.ಅವರ ನಡೆಯ ವಿರುದ್ಧ ಗ್ರಾಮದ ಬಿಜೆಪಿ   ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿ ಪ್ರಕಾರ  ಪುತ್ರ ಬೈಲ್ ಸಮೀಪ ಮಹಮ್ಮಾಯಿ ನಗರ ಎಂಬಲ್ಲಿ  ಬೈರ ಸಮಾಜದ ಕುಟುಂಬಸ್ಥರು ಅರಾಧಿಸಿಕೊಂಡು ಬರುತ್ತಿರುವ ಮಹಮ್ಮಾಯಿ ದೇವಿಯ ಗುಡಿ ಇದ್ದು ಜೀರ್ಣೋದ್ಧಾರಗೊಂಡು ಕಳೆದ ಮಾ 26 ರಿಂದ 27ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ನಡೆದಿತ್ತು. ಈ ಬಗ್ಗೆ ಸ್ಥಳೀಯರು ಶಾಸಕ ಹರೀಶ್ ಪೂಂಜ ಅವರಲ್ಲಿ ದೇವಸ್ಥಾನದ ಅಂಗಣಕ್ಕೆ ಇಂಟರ್ ಲಾಕ್ ಅಳವಡಿಸಿಕೊಡುವಂತೆ ಬೂತ್ ಅಧ್ಯಕ್ಷರ ಮೂಲಕ ಬೇಡಿಕೆ ಇಟ್ಟಾಗ ಶಾಸಕರು ತಕ್ಷಣ ಸ್ಪಂದಿಸಿ ಸುಮಾರು 3 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಸಿಕೊಟ್ಟಿದ್ದಾರೆ. ಇದನ್ನೇ ನೆಪವಾಗಿರಿಸಿಕೊಂಡು ಶಾಸಕರು ತನ್ನ ಗಮನಕ್ಕೆ ತಾರದೇ ಇಂಟರ್ ಲಾಕ್ ಅಳವಡಿಸಿಕೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ.

ಗ್ರಾಮದ ಅಭಿವೃದ್ಧಿ ಏನಿದ್ದರೂ ಗಿರೀಶ್ ಡೋಂಗ್ರೆ ಮತ್ತು ಸುಧಾಕರ್  ಮೂಲಕವೇ ಆಗಬೇಕು ನಮ್ಮ ಅನುಮತಿ ಇಲ್ಲದೇ ಗ್ರಾಮದಲ್ಲಿ ಒಂದು ಚಿಕ್ಕ ಕಾಮಗಾರಿಗಳು ನಡೆಯಬಾರದು ಎಂಬ ಸೂಚನೆಯನ್ನೂ ಶಾಸಕರಿಗೆ ನೀಡಿರುವ  ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ.ಒಂದು ಧಾರ್ಮಿಕ ಕ್ಷೇತ್ರಕ್ಕೆ ಅನುದಾನ ನೀಡಿರುವ ಬಗ್ಗೆ ಹಾಗೂ ಗ್ರಾಮದ ಅಭಿವೃದ್ಧಿ ಪರ ಚಿಂತನೆಗಳನ್ನು ಮಾಡುತ್ತಾ ಗ್ರಾಮದ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿ ಅಭಿನಂದನೆ ಸಲ್ಲಿಸುವುದನ್ನು ಬಿಟ್ಟು ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸುವುದು  ಎಷ್ಟು ಸರಿ ಎಂಬ ಪ್ರಶ್ನೆಗಳು ಸ್ಥಳೀಯವಾಗಿ ಕೇಳಿಬರುತ್ತಿದೆ. ಅದಲ್ಲದೇ ಶಾಸಕರಿಗೆ ಮುಜುಗರ ತರಿಸುವ ಕೆಲಸ ಮಾಡುತ್ತಿರುವುದು ಸರಿ ಅಲ್ಲ ಈ ಬಗ್ಗೆ ಸ್ಥಳೀಯ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸುಧಾಕರ್ ಅವರ ನಡೆಗೆ ಹಾಗೂ ಮಾಧ್ಯಮದ ಮೂಲಕ ಶಾಸಕರ ತೇಜೊವಧೆಗೆ ಪ್ರಯತ್ನಿಸುತ್ತಿರುವುದರ ಬಗ್ಗೆಯೂ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಹರಿದಾಡುತ್ತಿದೆ.

error: Content is protected !!