ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ಮನೆಯ ಮೇಲೆ ಬಿದ್ದ ತೆಂಗಿನ ಮರ ತಪ್ಪಿದ ಅನಾಹುತ

 

 

ಬೆಳ್ತಂಗಡಿ: ತಾಲೂಕಿನ ಕೆಲವೆಡೆ ಇಂದು ಸಂಜೆ ಭಾರೀ ಗಾಳಿ ಮಳೆಯಾಗುತಿದ್ದು ಬೆಳ್ತಂಗಡಿ ನಗರಕ್ಕೆ ಸಮೀಪದ ಹುಣ್ಸೆಕಟ್ಟೆ ಎಂಬಲ್ಲಿ ಕಮಲ ಎಂಬವರ ಹಂಚಿನ ಮನೆಗೆ ತೆಂಗಿನ ಮರವೊಂದು ಮುರಿದು ಬಿದ್ದು ಮನೆಗೆ ಸ್ವಲ್ಪ ಹಾನಿ ಸಂಭವಿಸಿದೆ . ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.ತಾಲೂಕಿನ ಹಲವು ಕಡೆಗಳಲ್ಲಿ ಸಿಡಿಲಿನ ಆರ್ಭಟ ಜೋರಾಗಿದ್ದು ಹಲವೆಡೆ ಗಾಳಿಯೂ ಜೋರಾಗಿತ್ತು ಎಂಬ ಮಾಹಿತಿ ಲಭ್ಯ ವಾಗಿದೆ.

error: Content is protected !!