ವಿದ್ಯುತ್ ತಂತಿ‌ ಆಕಸ್ಮಿಕವಾಗಿ ಹೆಚ್.ಟಿ. ಲೈನ್‌ಗೆ ತಗುಲಿ ವ್ಯಕ್ತಿ ಸಾವು: ನಿಷ್ಕ್ರಿಯಗೊಂಡಿದ್ದ ತಂತಿ‌ಗೆ ಲೈನ್ ತಗುಲಿ ಸಾವು ಸಂಭವಿಸಿದ ಸಾಧ್ಯತೆ: ಪಟ್ರಮೆ ಗ್ರಾಮದ ಪೆರ್ಮುಡ‌ ಬಳಿ‌‌ ನಡೆದ‌ ಘಟನೆ

 

 

ಬೆಳ್ತಂಗಡಿ: ಪಟ್ರಮೆ ಗ್ರಾಮದ ಪೆರ್ಮುಡ ಎಂಬಲ್ಲಿ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ದಾರುಣ ಘಟನೆ ಎ.8ರಂದು ನಡೆದಿದೆ. ಮೃತ ವ್ಯಕ್ತಿಯನ್ನು ಪಟ್ರಮೆ ಗ್ರಾಮದ ಪೆರ್ಮುಡ ನಿವಾಸಿ ಚೀಂಕ್ರ ಮುಗೇರರ ಪುತ್ರ ವಸಂತ ಎಂದು ಗುರುತಿಸಲಾಗಿದೆ.
ಪೆರ್ಮುಡದಲ್ಲಿ ನಿಷ್ಕ್ರೀಯಗೊಂಡಿದ್ದ ವಿದ್ಯುತ್ ಲೈನ್ ಇದ್ದು ಇದರ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಷಿಸಿದ್ದು, ಈ ವಿದ್ಯುತ್ ತಂತಿ ಪಕ್ಕದಲ್ಲೇ ಇದ್ದ ಹೆಚ್.ಟಿ. ಲೈನ್‌ಗೆ ತಗುಲಿದ್ದು ವಸಂತರವರು ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದು ಅವರ ದೇಹವು ಅರೆಸುಟ್ಟ ಸ್ಥಿತಿಯಲ್ಲಿತ್ತು.
ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳಾದ ಕ್ಲೆಮೆಂಟ್ ಬೆಂಜಾಮಿನ್ ಬ್ರಾಗ್ಸ್, ಸುಹಾಸ್ ಕುಮಾರ್, ಕೃಷ್ಣೆಗೌಡ್ರು, ಅಶೋಕ್ ಜೈನ್, ಹಾಗೂ ಧರ್ಮಸ್ಥಳ ಠಾಣಾ ಉಪ ನಿರೀಕ್ಷಕರಾದ ಕೃಷ್ಣ ಕಾಂತ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!