ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಈಶಾವಾಸ್ಯ ಪುರಸ್ಕಾರ

 

 

ಮಂಗಳೂರು: ಕಲೆಯಿಂದ ದೊರೆತದ್ದನ್ನು ಕಲೆಗೆ ಕಿಂಚಿತ್ತಾದರೂ ಮರಳಿಸುವ ಮೂಲಕ ಉಳಿತ್ತಾಯರ ಕಲಾ ಕುಟುಂಬ ಕಲಾಸೇವೆಯಲ್ಲಿ ಅನವರತ ತೊಡಗಿಸಿಕೊಂಡಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.

ಅವರು ವಾಮಂಜೂರು ಸಮೀಪದ ಉಳಾಯಿಬೆಟ್ಟು ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಈಶಾವಾಸ್ಯ ಪುರಸ್ಕಾರ ಪ್ರದಾನ‌ ಮಾಡಿ ಆಶೀರ್ವಚನ ನೀಡಿದರು.
ಅಪಾರ ಜ್ಞಾನವನ್ನು ಸರಳವಾದ ರೀತಿಯಲ್ಲಿ ಹೇಳಿಕೊಡುವುದ ಯಕ್ಷಗಾನದ ವಿಶೇಷ. ಬೌದ್ಧಿಕ ಸಂಪತ್ತನ್ನು ಗಳಿಸಲು ಇರುವ ಸುಲಭ ಉಪಾಯ ಯಕ್ಷಗಾನ ವೀಕ್ಷಣೆ. ಕಡಿಮೆ ಶೈಕ್ಷಣಿಕ ಅರ್ಹೆತೆಯಾದರೂ ಅಪಾರ ವಿದ್ವತ್ ಸಾಧನೆ ಯಕ್ಷಗಾನ ಕಲಾವಿದರದ್ದು. ಆಟಕೂಟಗಳಿಗೆ ತಕ್ಕುದಾದ ಪಾಂಡಿತ್ಯ, ಕುಣಿತ ಸಿದ್ಧಿ ಹೊಂದಿದವರು ಸುಣ್ಣಂಬಳರು ಎಂದರು.
ಕಟೀಲು ಮೇಳದ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಪ್ರಶಸ್ತಿ ಸ್ವೀಕರಿಸಿ ಪ್ರತೀ ವಚನ ಸಲ್ಲಿಸಿದರು.
ಕಲಾವಿದ ಉಜಿರೆ ಅಶೋಕ ಭಟ್ಟರು ಅಭಿನಂದನಾ ಭಾಷಣ ಮಾಡಿ, ಆಕ್ರಮಣ ಕಾರಿ ಅರ್ಥಗಾರಿಕೆ ಮಾಡದೇ ಯಾರನ್ನೂ‌ ಅನುಕರಿಸದೇ ಅನುಸರಿಸದೇ ಸ್ವಂತ ನೆಲೆಯಲ್ಲಿ ಹಂತ ಹಂತವಾಗಿ ಬೆಳೆದ ಕಲಾವಿದ ಸುಣ್ಣಂಬಳರು ಎಂದರು.
ವೆಂಕಟರಮಣ ಉಳಿತ್ತಾಯ, ಅಮರಾವತಿ, ಎಂ.‌ಲಕ್ಷ್ಮೀಶ ಅಮ್ಮಣ್ಣಾಯ, ಗೀತಾ ಅಮ್ಮಣ್ಣಾಯ ಉಪಸ್ಥಿತರಿದ್ದರು.
ಈಶಾವಾಸ್ಯ ಪುರಸ್ಕಾರದ ಸಂಘಟಕ ಕಲಾವಿದ, ಲೇಖಕ ಕೃಷ್ಣ ಪ್ರಕಾಶ ಉಳಿತ್ತಾಯ ಸ್ವಾಗತಿಸಿ, ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ವಂದಿಸಿದರು. ಲಕ್ಷ್ಮೀ ಮಚ್ಚಿನ ನಿರ್ವಹಿಸಿದರು.
ಅಗರಿ ಶ್ರೀನಿವಾಸ ಭಾಗವತ ವಿರಚಿತ ಶ್ರೀದೇವೀ ಭ್ರಮರಾಂಬಿಕಾ ವಿಲಾಸ ತಾಳಮದ್ದಳೆ ನಡೆಯಿತು. ಕಲಾವಿದರಾಗಿ ದಿನೇಶ್ ಅಮ್ಮಣ್ಣಾಯ, ರಮೇಶ ಭಟ್ ಪುತ್ತೂರು, ಪದ್ಯಾಣ ಶಂಕರ ನಾರಾಯಣ ಭಟ್, ಜಗನ್ನಿವಾಸ ರಾವ್ ಪುತ್ತೂರು, ರಾಮಪ್ರಸಾದ ಕಲ್ಲೂರಾಯ, ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಹರೀಶ ಬಳಂತಿಮೊಗರು, ವಾದಿರಾಜ ಕಲ್ಲೂರಾಯ, ವಿದುಷಿ ಸುಮಂಗಲಾ ರತ್ನಾಕರ್, ಶ್ರೀನಿವಾಸ ಮೂರ್ತಿ ಭಾಗವಹಿಸಿದ್ದರು.

error: Content is protected !!