ಬೆಳ್ತಂಗಡಿ: ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ ಮಂಗಳೂರು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ( ಎನ್.ಎಫ್.ಡಿ.ಬಿ) ಹೈದರಾಬಾದ್. ಭಾ ಕೃ ಸಂ ಪ – ಅಖಿಲ ಭಾರತ ಸಹ- ಸಂಘಟಿತ ಸಂಶೋಧನಾ ಯೋಜನೆ-ಸಿಹೆಚ್ಇಟಿ, ಮಂಗಳೂರು ಮತ್ತು ಗ್ರಾಮ ಪಂಚಾಯಿತಿ ಹಾಗೂ ಸಮಗ್ರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಲಾಯಿಲ ಬೆಳ್ತಂಗಡಿ ಇವರುಗಳ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಸಮುದಾಯದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯ ತರಬೇತಿ ಲಾಯಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ಸಲ್ದಾನ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಯಶೋಧ ಅಧ್ಯಕ್ಷರು ಸಮಗ್ರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಲಾಯಿಲ ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗಣೇಶ್ ಆರ್ , ಉಪಾಧ್ಯಕ್ಷರು ಗ್ರಾ.ಪಂ ಲಾಯಿಲ, ಪ್ರಕಾಶ್ ಶೆಟ್ಟಿ ನೊಚ್ಛ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾಯಿಲ, ಜಯಾನಂದ ತಾಲೂಕು ವಲಯ ಮೇಲ್ವಿಚಾರಕರು ಬೆಳ್ತಂಗಡಿ, ಶ್ರೀಮತಿ ಸಾವಿತ್ರಿ ಕೃಷ್ಣಪ್ಪ ಕಾರ್ಯದರ್ಶಿ ಸ್ನೇಹ ಸಂಜೀವಿನಿ ಲಾಯಿಲ ಹಾಗೂ ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಹಾಗೂ ಇನ್ನಿತರರು ಭಾಗವಹಿಸಿದ್ದರು.