ಜನಪರ ಚಿಂತನೆಯುಳ್ಳ ಶಾಸಕ ಹರೀಶ್ ಪೂಂಜ: ಸಚಿವ ಸುನೀಲ್ ಕುಮಾರ್ ಮಾಜಿ ಶಾಸಕರಿಗೆ ಹರೀಶ್ ಪೂಂಜ ಕೃತಜ್ಞತೆ ಸಲ್ಲಿಸಬೇಕು : ನಳೀನ್ ಕುಮಾರ್ ಕಟೀಲ್ ₹ 33.72 ಕೋಟಿ ವೆಚ್ಚದ 538 ವಿದ್ಯುತ್ ಪರಿವರ್ತಕಗಳ ಕಾಮಗಾರಿಗಳಿಗೆ ಶಿಲಾನ್ಯಾಸ.

 

 

ಬೆಳ್ತಂಗಡಿ:ಬಹು ಸಂಖ್ಯೆಯಲ್ಲಿ ಕಿಂಡಿ ಅಣೆಕಟ್ಟುಗಳು ರಸ್ತೆಗಳು ತಾಲೂಕಿನಲ್ಲಿ ನಿರ್ಮಾಣವಾಗುತ್ತಿವೆ ಸರ್ಕಾರಿ ಕಛೇರಿಗಳು ಅಭಿವೃದ್ಧಿಯನ್ನು ಕಾಣುತ್ತಿವೆ ವಿನೂತನವಾದ ಯೋಜನೆಗಳನ್ನು ಮಾಡುತ್ತ ನಿಜವಾದ ಅರ್ಥದಲ್ಲಿ ಬೆಳ್ತಂಗಡಿಯು ನವ ಬೆಳ್ತಂಗಡಿಯಾಗಿ ಪರಿವರ್ತನೆಯ  ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ.ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಹಾಗೂ ದ.ಕ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

 

 

ಅವರು ಮಾ 12 ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಕೃಷಿಕರ ಅಭ್ಯುದಯಕ್ಕಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಅನಿಯಮಿತವಾಗಿ ವಿದ್ಯುತ್ ಪೊರೈಸಲು ರೂ 33.72 ಕೋಟಿ ವೆಚ್ಚದ 538 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಒಬ್ಬ ಜನಪರವಾಗಿ ಆಲೋಚನೆಗಳನ್ನು ಮಾಡುವಂತಹ ಶಾಸಕರನ್ನು ಆಯ್ಕೆ ಮಾಡಿದರೆ ಯಾವ ರೀತಿ ಅಭಿವೃದ್ಧಿ ಕಾಣಲು ಸಾಧ್ಯ ಇದೆ ಎನ್ನುವುದನ್ನು ಹರೀಶ್ ಪೂಂಜ ಅವರು ಮಾಡಿ ತೋರಿಸಿದ್ದಾರೆ.

 

 

ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ 220 ಕೆ.ವಿ ವಿದ್ಯುತ್ ಸಬ್ ಸ್ಟೇಶನ್, ಕುತ್ಲೂರಿನಲ್ಲಿ 110 ಕೆ.ವಿ ವಿದ್ಯುತ್ ಸಬ್ ಸ್ಟೇಶನ್, ಉಜಿರೆಗೆ 33 ಕೆ.ವಿ ಸಬ್ ಸ್ಟೇಶನ್ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

 

 

ಸಂಸದ ನಳೀನ್ ಕುಮಾರ್ ಮಾತನಾಡಿ
ಅಭಿವೃದ್ಧಿ ಪರ ಚಿಂತನೆಗಳೊಂದಿಗೆ ತನ್ನ ಕ್ಷೇತ್ರದ ಜನತೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಆ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯ ಅದಕ್ಕೆ ಸಾಕ್ಷಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಳೆದ 4 ವರ್ಷ ಗಳ ಹಿಂದಿನ ಬೆಳ್ತಂಗಡಿ ಚಿತ್ರಣ ಹೇಗಿತ್ತು ಎಂಬುವುದನ್ನು ಊಹಿಸಿಕೊಂಡಾಗ ಶಾಸಕ ಹರೀಶ್ ಪೂಂಜ ಮಾಜಿ ಶಾಸಕರಿಗೆ ಮೊದಲು ಕೃತಜ್ಙತೆಯನ್ನು ಸಲ್ಲಿಸಬೇಕು ಯಾಕೆಂದರೆ ಅವರು ಅಭಿವೃದ್ಧಿ ಪರ ಚಿಂತನೆಗಳನ್ನು ಮಾಡದೇ ಇದ್ದುದರಿಂದ ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ಹರೀಶ್ ಪೂಂಜ ಅವರಿಗೆ ತಾಲೂಕನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಯಿತು ಎಂದರು.

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ ವಹಿಸಿ ತಾಲೂಕಿನಲ್ಲಿ ಆಗಬೇಕಾದ ವಿದ್ಯುತ್ ಕಾಮಗಾರಿಗಳ ಬೇಡಿಕೆಯನ್ನು ಸಚಿವರ ಮುಂದಿಟ್ಟರು

 

 

 

ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,
ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ,
ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಡಿ.ಪದ್ಮಾವತಿ,ಮೆಸ್ಕಾಂ ಮಂಗಳೂರು ವಲಯದ ಮುಖ್ಯ ಇಂಜಿನಿಯರ್ ಪುಷ್ಪ, ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣ ರಾಜು, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್ .ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ
ಅಧ್ಯಕ್ಷರು, ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.

 

ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಗ್ರಾಮದ ಪರವಾಗಿ ಸಚಿವ ಸುನಿಲ್ ಕುಮಾರ್ ಅವರನ್ನು ಪುಸ್ತಕಗಳನ್ನು ನೀಡುವ ಮೂಲಕ ಗೌರವಿಸಲಾಯಿತು.
ಮಡಂತ್ಯಾರ್ ಮೆಸ್ಕಾಂನ ಲೀಲಾವತಿ ಪ್ರಾರ್ಥನೆ ಹಾಡಿದರು, ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿ, ಬೆಳ್ತಂಗಡಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಚ್ ಶಿವಶಂಕರ್ ಧನ್ಯವಾದವಿತ್ತರು.

error: Content is protected !!