ಬೆಳ್ತಂಗಡಿ: ಮತ್ಸ್ಯ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದ ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ
ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು. ನದಿಯ ಇನ್ನೊಂದು ಭಾಗದ ಜನರಿಗೆ ದೇವಾಲಯಕ್ಕೆ ಬರಲು ಸುತ್ತಿ ಬಳಸಿ ಬರಬೇಕಾದ ಅನಿವಾರ್ಯತೆ ಇತ್ತು ಬೇಸಿಗೆ ಕಾಲದಲ್ಲಿ ನದಿಗೆ ಅಡ್ಡಲಾಗಿ ತಾತ್ಕಲಿಕ ಕಬ್ಬಿಣದ ಸೇತುವೆ ನಿರ್ಮಿಸಿ ದೇವಸ್ಥಾನಕ್ಕೆ ಬರುತಿದ್ದರು ಅದೆಷ್ಟೋ ವರುಷಗಳಿಂದ ಹಲವಾರು ಬಾರಿ ಈ ಬಗ್ಗೆ ಸಂಬಂಧ ಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರತಿಫಲ ಕಾಣಲಿಲ್ಲ . ಈ ಬಗ್ಗೆ 2021 ಜ 20 ರಂದು ಕೇಳ್ಕರ ದೇವಾಲಯದ ವಿಶೇಷ ವರದಿಯೊಂದಿಗೆ ಸೇತುವೆ ಅವಶ್ಯಕತೆಯ ಬಗ್ಗೆಯೂ ಪ್ರಜಾಪ್ರಕಾಶ ನ್ಯೂಸ್ ಉಲ್ಲೇಖ ಮಾಡಿತ್ತು. ಈ ಬಗ್ಗೆ ಸಾರ್ವಜನಿಕರು ಶಾಸಕ ಹರೀಶ್ ಪೂಂಜ ಅವರಲ್ಲಿ ಸಮಸ್ಯೆಯ ಬಗ್ಗೆ ತಿಳಿಸಿದಾಗ ಅವರು ಈ ಬಗ್ಗೆ ಸ್ಪಂದಿಸಿ ಸುಮಾರು 3.25 ಕೋಟಿ ಪಶ್ಚಿಮವಾಹಿನಿ ಯೋಜನೆಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಾ 12 ಶನಿವಾರ ಶಿಲಾನ್ಯಾಸ ನೆರವೇರಿಸಿದರು.ಈ ಮೂಲಕ ಬಹುಬೇಡಿಕೆಯ ಕೇಳ್ಕರ ಸಂಪರ್ಕ ಸೇತು ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣದ ಸ್ಥಳೀಯರ ಕನಸು ನನಸಾಗಿದೆ.
ಇದನ್ನೂ ಒದಿ: ಬೆಳ್ತಂಗಡಿ ತಾಲೂಕಿನ ಮತ್ಸ್ಯ ಕ್ಷೇತ್ರ ಕೇಳ್ಕರ