ಚಂದ್ಕೂರು: ₹ 4 ಕೋ.ರೂ. ವೆಚ್ಚದಲ್ಲಿ ಬೃಹತ್ ಗಾತ್ರದ ವಾಹನ ಸಂಚಾರ ಯೋಗ್ಯ, ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ: ಶಾಸಕ ಹರೀಶ್ ಪೂಂಜ ಹೇಳಿಕೆ

 

 

 

ಬೆಳ್ತಂಗಡಿ: ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ವೇಳೆ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂಬ ಸ್ಥಳೀಯರ ಮನವಿಯಂತೆ ರಸ್ತೆಗೆ ಒಂದೇ ದಿನದಲ್ಲಿ ಡಾಂಬರೀಕರಣಗೊಳಿಸಿ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ನಿರ್ಮಿಸಲಾಗಿದೆ ಅದೇ ರೀತಿ ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ತಾಯಿಯ ಆಶೀರ್ವಾದದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಮೂಲಕ , ಬೃಹತ್ ಗಾತ್ರದ ವಾಹನ ಸಂಚಾರಕ್ಕೂ ಯೋಗ್ಯವಾಗುವ ರೀತಿಯಲ್ಲಿ ಗ್ರಾಮೀಣ ಭಾಗದಲ್ಲಿ 4 ಕೋ.ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಎಂದು ಶಾಸಕ ಹರೀಶ್ ಪೂಂಜ‌‌ ಹೇಳಿದರು.
ಅವರು ಚಂದ್ಕೂರು ಕುತ್ರೊಟ್ಟು ಸಮೀಪದ ದೇವರ ಗುಂಡಿ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ‌ಮಾತನಾಡಿದರು.
2 ತಿಂಗಳಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಉದ್ಘಾಟನೆಗೆ ಸಜ್ಜಾಗಲಿದೆ. ಎರಡು ಜಿಲ್ಲೆಯಲ್ಲಿ ಯಡಿಯೂರಪ್ಪ ಅವರ ಸಹಕಾರ ಸ್ಮರಿಸಬೇಕಿದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ 4, ಸಾವಿರ ಕೋ.ರೂ. ಮೀಸಲಿರಿಸಿದ್ದಾರೆ. ಪ್ರತಿ ವರ್ಷ 500 ಕೋ.ರೂ. ಒದಗಿಸಲಾಗುತ್ತಿದೆ. ಕಳೆದ ವರ್ಷ 24 ಈವರ್ಷ 12 ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ‌ ಎಂದರು.

ಶಾಸಕನಾಗಿ ಎಲ್ಲಾ ಕಾಮಗಾರಿಗಳನ್ನು ಗಮನಿಸಲು ನನ್ನಿಂದ ಅಸಾಧ್ಯ ಅದ್ದರಿಂದ ನಡೆಯುತ್ತಿರುವ ಕಾಮಗಾರಿಯಲ್ಲಿ ಏನಾದರೂ ತೊಂದರೆ ಕಂಡು ಬಂದರೆ ದಯವಿಟ್ಟು ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಲ್ಲಿ ಶಾಸಕರು ಮನವಿ ಮಾಡಿದರು ಅದಲ್ಲದೇ ಅಭಿವೃದ್ಧಿಯನ್ನು ಸಹಿಸಲು ಆಗದ ಕೆಲವರು ಅಗೆಯುವಂತಹ ಕೆಲಸವನ್ನು ಮಾಡುತ್ತಾರೆ ಅಂತವರಿಗೆ ಈ ಮೂಲಕ ನೀವೇ ಉತ್ತರ ನೀಡಬೇಕು ಎಂದರು.

error: Content is protected !!