ಮಾಜಿ ಶಾಸಕ ವಸಂತ ಬಂಗೇರ ಮತ್ತು ದಿನೇಶ್ ತಾಯಿ ಆರೋಪ ಕಾನತ್ತೂರು ಸೇರಿದಂತೆ ಮೂರು ಪುಣ್ಯಕ್ಷೇತ್ರಗಳೊಂದರಲ್ಲಿ ಪ್ರಮಾಣಕ್ಕೆ ಬನ್ನಿ:ಭಾಸ್ಕರ ಧರ್ಮಸ್ಥಳ

 

 

 

ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ, ಮರಸಾಗಾಟ, ಗೋ ಸಾಗಾಟದವರಿಗೆ ಬೆಂಬಲ ನೀಡುತಿದ್ದೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ ನನ್ನ ಬಗ್ಗೆ ಆರೋಪ ಮಾಡಿದ್ದಾರೆ. ಈ ಬಗ್ಗೆ ನಾನು ತಿಳಿಸಿದ ಮೂರು ಪುಣ್ಯಕ್ಷೇತ್ರಗಳ ಪೈಕಿ ಒಂದು ಕ್ಷೇತ್ರಕ್ಕೆ ಬಂದ್ದು ಪ್ರಮಾಣ ಮಾಡಬೇಕು ಎಂದು ಭಾಸ್ಕರ ಧರ್ಮಸ್ಥಳ ಹೇಳಿದ್ದಾರೆ. ಅವರು ಫೆ 02 ರಂದು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಹಲವಾರು ವರುಷಗಳಿಂದ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡು ಪ್ರಮಾಣಿಕವಾಗಿ ಹಿಂದೂ ಸಮಾಜಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ ಅದರೆ ಮಾಜಿ ಶಾಸಕ ವಸಂತ ಬಂಗೇರ ಅವರು ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ನನ್ನ ಮೇಲೆ ಮಾಡುತ್ತಿರುವುದು ಅದೇ ರೀತಿ  ಕನ್ಯಾಡಿ ದಿನೇಶ್ ಸಾವು ಪ್ರಕರಣದಲ್ಲೂ ಇಲ್ಲ ಸಲ್ಲದ ಆರೋಪಗಳನ್ನು ನಮ್ಮ ಮಾಡುತಿದ್ದಾರೆ. ದಿನೇಶ್ ಕುಟುಂಬ ಹಾಗೂ ನಾವು ಒಂದೇ ಮನೆಯವರ ಹಾಗೆ ಇದ್ದವರು   ಮೊನ್ನೆ ಯಾವುದೋ ವಿಚಾರದಲ್ಲಿ  ಕನ್ಯಾಡಿ ಅಂಗಡಿ ಸಮೀಪ  ನನ್ನ ತಮ್ಮನಿಗೆ ಮತ್ತು ದಿನೇಶನಿಗೆ ಗಲಾಟೆ ನಡೆದಿದೆ. ಆ ಸಂದರ್ಭ ದಿನೇಶನನ್ನು ನನ್ನ ತಮ್ಮ ಕೃಷ್ಣ ಡಿ ತಳ್ಳಿದ್ದಾನೆ. ಅದರೆ ಮರುದಿನ ಸಂಜೆ ನನಗೆ ದಿನೇಶನ ಮಗಳು ಪೋನ್ ಮಾಡಿ ವಿಚಾರ ತಿಳಿಸಿ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದೇವೆ ಎಂದಾಗ ತಕ್ಷಣ ತಮ್ಮನಲ್ಲಿ ಈ ಬಗ್ಗೆ ವಿಚಾರಿಸಿ ಅವನನ್ನು ಮತ್ತು ಅವನ ಹೆಂಡತಿಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೇನೆ ಅಲ್ಲಿಂದ ದಿನೇಶನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡು ಅವರೇ  ಹೋಗಿದ್ದಾರೆ. ಅಲ್ಲಿ  ಅವನು ಮಧ್ಯರಾತ್ರಿ ಸಾವನ್ನಪ್ಪಿದ್ದಾನೆ. ಅದರೆ ಇದನ್ನೇ ನೆಪವಾಗಿಟ್ಟುಕೊಂಡು  ದಲಿತ ಯುವಕನ ಹತ್ಯೆ ನಡೆದಿದೆ ಭಜರಂಗದಳದ ಮುಖಂಡ ಮಾಡಿದ್ದಾರೆ ಅದಲ್ಲದೇ ಗೋ ಮಾಂಸ ತಿನ್ನುತ್ತಾರೆ ಎಂಬ ಆರೋಪವನ್ನೂ ಮಾಡಿದ್ದಾರೆ ಇದಕ್ಕೆ ದಿನೇಶನ ತಾಯಿ ಕೂಡ ಧ್ವನಿಗೂಡಿಸಿದ್ದಾರೆ. ಅದ್ದರಿಂದ ಈ ಎಲ್ಲ ಕಾರಣಗಳಿಗಾಗಿ ಮಾಜಿ ಶಾಸಕ ವಸಂತ ಬಂಗೇರ ಅವರು ನನ್ನ ಮೇಲೆ ಮಾಡುತ್ತಿರುವ ಆರೋಪಗಳಿಗೆ ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ಅಥವಾ ಕಾನತ್ತೂರು, ಅಥವಾ ಕೊರಗಜ್ಜನ ಮೂಲ ಕ್ಷೇತ್ರ ಕುತ್ತಾರ್ ಇಲ್ಲಿಗೆ ಬಂದ್ದು ದಿನೇಶ್ ತಾಯಿಯನ್ನೂ ಕರೆದುಕೊಂಡು ಬಂದ್ದು ಪ್ರಮಾಣ ಮಾಡಬೇಕು .ತಮ್ಮ ಕೊಳಕು ರಾಜಕೀಯಕ್ಕಾಗಿ ಏನೆನೋ ಹೇಳುವುದಲ್ಲ ನನ್ನ ಈ ಸವಾಲನ್ನು ಸ್ವೀಕರಿಸಿ ಪ್ರಮಾಣಕ್ಕೆ ಬರಬೇಕು ಎಂದರು ಅದಲ್ಲದೇ ಕೃಷ್ಣ ಡಿ ಭಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು.

error: Content is protected !!